ಬೆಳ್ತಂಗಡಿ, ಮಾರ್ಚ್ 07, 2024 (ಕರಾವಳಿ ಟೈಮ್ಸ್) : ಉಜಿರೆ ಹಳೆ ಪೇಟೆಯ ಲಾಡ್ಜಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೆಳ್ತಂಗಡಿ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡ ಘಟನೆ ಬುಧವಾರ ನಡೆದಿದೆ.
ಬಂಧಿತ ಆರೋಪಿಗಳನ್ನು ತುಮಕೂರು, ಅರಳೇಪೇಟೆ-ಬದ್ನಾಳ್ ಕಂಪೌಂಡ್ ನಿವಾಸಿ ರೇಣುಕಾ ಪ್ರಸಾದ್ (29), ಕಾರ್ಕಳ ನಿಟ್ಟೆ ಗ್ರಾಮದ ನಿವಾಸಿ ರಾಜೇಶ್ ಮೋಹನ್ ನಾಯರ್ (34) ಹಾಗೂ ಕಾರ್ಕಳ-ನೂರಾಲ್ ಬೆಟ್ಟು ನಿವಾಸಿ ನಿತಿನ್ ಕುಮಾರ್ (28) ಎಂದು ಗುರುತಿಸಲಾಗಿದೆ.
ಉಜಿರೆ ಹಳೆಪೇಟೆಯಲ್ಲಿರುವ ಸುರೇಶ್ ಲಾಡ್ಜ್, ಬೋರ್ಡಿಂಗ್ ಆಂಡ್ ಲಾಡ್ಜ್‍ಂಗ್/ ಐಶ್ವರ್ಯಾ ಲಾಡ್ಜ್, ಬೋರ್ಡಿಂಗ್ ಆಂಡ್ ಲಾಡ್ಜ್‍ಂಗ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಬುಧವಾರ ದಾಳಿ ನಡೆಸಿದ ಬೆಳ್ತಂಗಡಿ ಪೊಲೀಸ್ ಇನ್ಸ್ ಪೆಕ್ಟರ್ ಬಿ ಜಿ ಸುಬ್ಬಾಪೂರ ಮಠ್ ಅವರ ನೇತೃತ್ವದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ದಾಳಿ ವೇಳೆ ಸ್ಥಳದಲ್ಲಿದ್ದ ನೊಂದ ಮಹಿಳೆಯನ್ನು ಮಹಿಳಾ ಸಿಬ್ಬಂದಿಗಳ ಭದ್ರತೆಗೆ ಒಪ್ಪಿಸಲಾಗಿದೆ. ಬಂಧಿತ ಹಾಗೂ ದಾಳಿ ವೇಳೆ ಪರಾರಿಯಾದ ಆರೋಪಿಗಳ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 30/24 ಕಲಂ 3, 4, 5, 5 (ಡಿ) ಐಟಿಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
0 comments:
Post a Comment