ಮಂಗಳೂರು, ಮಾರ್ಚ್ 10, 2024 (ಕರಾವಳಿ ಟೈಮ್ಸ್) : ತೆಂಗಿನಕಾಯಿ ತೆಗಿಯಲು ನೀರಿಗಿಳಿದ ಯುವಕನೋರ್ವ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಕಟೀಲು ಎಂಬಲ್ಲಿ ನಡೆದಿದ್ದು, ಶನಿವಾರ ಬೆಳಿಗ್ಗೆ ಗೂಡಿನಬಳಿ ಈಜುಪಟು ಜೀವರಕ್ಷಕ ತಂಡದ ಯುವಕರು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ಮೃತ ಯುವಕನನ್ನು ಕಟೀಲು ಮೂಲದ ಅಶೋಕ್ (35) ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಸುಮಾರು 5.10 ರ ವೇಳೆಗೆ ಅಶೋಕ್ ತೆಂಗಿನಕಾಯಿ ತೆಗೆಯಲು ನದಿ ನೀರಿಗೆ ಇಳಿದಿದ್ದಾರೆ. ಈ ಸಂದರ್ಭ ಆಯತಪ್ಪಿ ನೀರಿಗೆ ಬಿದ್ದು ಮುಳುಗಿದ್ದಾರೆ. ಈತನ ಜೊತೆಯಲ್ಲಿದ್ದ ಇನ್ನೊಬ್ಬ ಯುವಕ ನೀಡಿದ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಪೆÇಲೀಸರು ಹಾಗೂ ಸ್ಥಳೀಯರು ಘಟನೆಯನ್ನು ಖಚಿತ ಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಗೂಡಿನಬಳಿ ನಿವಾಸಿ, ಇಲ್ಲಿನ ಈಜುಪಟು ಜೀವರಕ್ಷಕ ತಂಡದ ಪ್ರಮುಖರಾದ ಮುಹಮ್ಮದ್ ಮಮ್ಮು ಹಾಗೂ ಇರ್ಶಾದ್ ಡ್ರೀಮ್ಸ್ ಗೂಡಿನಬಳಿ ಅವರು ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಬಜ್ಪೆ ನಗರ ಠಾಣಾ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಬಜ್ಪೆ ಸರಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಕರಿಗೆ ಮೃತದೇಹ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
0 comments:
Post a Comment