ಬಿ.ಸಿ.ರೋಡು : ಹಳೆ ತಾ.ಪಂ. ಕಟ್ಟಡ ಕೆಡವಿದ ಜಾಗದಲ್ಲಿ ನಿಲ್ಲಿಸಿದ್ದ ಡಿವೋ ದ್ವಿಚಕ್ರ ವಾಹನ ಕಳವು - Karavali Times ಬಿ.ಸಿ.ರೋಡು : ಹಳೆ ತಾ.ಪಂ. ಕಟ್ಟಡ ಕೆಡವಿದ ಜಾಗದಲ್ಲಿ ನಿಲ್ಲಿಸಿದ್ದ ಡಿವೋ ದ್ವಿಚಕ್ರ ವಾಹನ ಕಳವು - Karavali Times

728x90

25 March 2024

ಬಿ.ಸಿ.ರೋಡು : ಹಳೆ ತಾ.ಪಂ. ಕಟ್ಟಡ ಕೆಡವಿದ ಜಾಗದಲ್ಲಿ ನಿಲ್ಲಿಸಿದ್ದ ಡಿವೋ ದ್ವಿಚಕ್ರ ವಾಹನ ಕಳವು

ಬಂಟ್ವಾಳ, ಮಾರ್ಚ್ 25, 2024 (ಕರಾವಳಿ ಟೈಮ್ಸ್) : ಬಿ ಸಿ ರೋಡಿನ ಹಳೆ ತಾಲೂಕು ಪಂಚಾಯತ್ ಕಟ್ಟಡ ಕೆಡವಿದ ಜಾಗದಲ್ಲಿ ನಿಲ್ಲಿಸಿದ ಡಿವೋ ದ್ವಿಚಕ್ರ ವಾಹನ ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇರ್ವತ್ತೂರು ಗ್ರಾಮದ ನಿವಾಸಿ ಕಾರ್ತಿಕ್ (21) ಅವರು ಶನಿವಾರ ಬೆಳಿಗ್ಗೆ ತನ್ನ ಬಾಬ್ತು ಕೆಎ 70 ಜೆ1430 ನೋಂದಣಿ ಸಂಖ್ಯೆಯ ಹೋಂಡಾ ಮ್ಯಾಟ್ರಿಕ್ಸ್ ಕಂಪೆನಿಯ ಡಿವೋ ದ್ವಿಚಕ್ರ ವಾಹನವನ್ನು  ಬಿ ಮೂಡ ಗ್ರಾಮ ಬಿ ಸಿ ರೋಡು ಹಳೆಯ ತಾಲೂಕು ಪಂಚಾಯತ್ ಕಟ್ಟಡ ಕೆಡವಿದ ಖಾಲಿ ಜಾಗದಲ್ಲಿ ನಿಲ್ಲಿಸಿ ಕೆಲಸಕ್ಕೆ ಹೋಗಿದ್ದಾರೆ. ಅದೇ ದಿನ ರಾತ್ರಿ ವಾಪಾಸು ಬಂದು ನೋಡಿದಾಗ, ದ್ವಿಚಕ್ರ ವಾಹನ ಕಳವಾಗಿದೆ. ಕಳವಾಗಿರುವ ವಾಹನದ ಮೌಲ್ಯ 55 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು : ಹಳೆ ತಾ.ಪಂ. ಕಟ್ಟಡ ಕೆಡವಿದ ಜಾಗದಲ್ಲಿ ನಿಲ್ಲಿಸಿದ್ದ ಡಿವೋ ದ್ವಿಚಕ್ರ ವಾಹನ ಕಳವು Rating: 5 Reviewed By: karavali Times
Scroll to Top