ಪುತ್ತೂರು, ಮಾರ್ಚ್ 14, 2024 (ಕರಾವಳಿ ಟೈಮ್ಸ್) : ತೋಟದಿಂದ ತೆಂಗಿನ ಕಾಯಿ ತೆಗೆಸುತ್ತಿದ್ದ ಮಹಿಳೆಗೆ ಪಕ್ಕದ ತೋಟದ ಮಾಲಿಕ ಹಲ್ಲೆ ನಡೆಸಿದ ಬಗ್ಗೆ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ನಿವಾಸಿ ಸಂತ್ರಸ್ತ ಮಹಿಳೆಯು ತನ್ನ ತಂದೆಯ ಮನೆಯಲ್ಲಿ ವಾಸವಿದ್ದು, ತಂದೆಯ ಮರಣಾ ನಂತರ ಅವರ ಅಡಿಕೆ ಮತ್ತು ತೆಂಗಿನ ತೋಟವನ್ನು ನೋಡಿಕೊಳ್ಳುತ್ತಿದ್ದಾರೆ. ಬುಧವಾರ ಸಂಜೆ ಮಹಿಳೆ ತನ್ನ ಸಹೋದರನೊಂದಿಗೆ ತೋಟಕ್ಕೆ ತೆರಳಿ, ಪರಿಚಯದ ನೌಫಲ್ ಎಂಬವರಿಂದ ಎಳ ನೀರು ಹಾಗೂ ತೆಂಗಿನ ಕಾಯಿ ತೆಗೆಸುತ್ತಿದ್ದಾಗ, ಪಕ್ಕದ ತೋಟದವ, ಆರೋಪಿ ಎಂ ಕೆ ಉಮ್ಮರ್ ಎಂಬಾತ ಮಹಿಳೆಯ ಬಳಿಗೆ ಬಂದು ತೆಂಗಿನ ಮರದ ವಿಚಾರದಲ್ಲಿ ತಕರಾರು ತೆಗೆದು ಅವ್ಯಾಚವಾಗಿ ಬೈದು, ಅನುಚಿತವಾಗಿ ವರ್ತಿಸಿದ್ದಾನೆ. ಈ ಸಂದರ್ಭ ಮಹಿಳೆ ಜೋರಾಗಿ ಕೂಗಿದ್ದು, ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಆಕೆಯ ತಮ್ಮ ಮಹಮ್ಮದ್ ಮುಸ್ತಾಫ್ ಹಾಗೂ ತೆಂಗಿನ ಕಾಯಿ ತೆಗೆಯುತ್ತಿದ್ದ ನೌಫಲ್ ಅಲ್ಲಿಗೆ ಬಂದಿದ್ದು, ಈ ಸಂದರ್ಭ ಆರೋಪಿ ಮಹಿಳೆಗೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯಿಂದ ಗಾಯಗೊಂಡ ಮಹಿಳೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ದ.ಕ ಮಹಿಳಾ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಖ 12/2024 ಕಲಂ 447, 354(ಎ), 323, 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment