ಬಂಟ್ವಾಳ, ಮಾರ್ಚ್ 09, 2024 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಹಳೆ ಹಾಗೂ ಶಿಥಿಲಗೊಂಡ ನೇತ್ರಾವತಿ ಸೇತುವೆಯಲ್ಲಿ ಘನ ಸಂಚಾರ ನಿಷೇಧಿಸುವ ಹಿನ್ನಲೆಯಲ್ಲಿ ಇತ್ತೀಚೆಗೆ ಪುರಸಭೆÀ ಕಬ್ಬಿಣದ ರಾಡ್ ಮೂಲಕ ಅಳವಡಿಸಿರುವ ತಡೆ ಬೇಲಿಗೆ ಶನಿವಾರ ಸಂಜೆ ಪಿಕಪ್ ವಾಹನ ಸಿಲುಕಿಕೊಂಡ ಘಟನೆ ನಡೆಯಿತು.
ಪಿಕಪ್ ವಾಹನ ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಅವಾಂತರ ಸಂಭವಿಸಿದೆ. ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿ ಕಬ್ಬಿಣದ ರಾಡ್ ಅಳವಡಿಸಿರುವ ಬಗ್ಗೆ ಕಂಡುಕೊಂಡರೂ ಕೂಡಾ ಬಲವಂತದಿಂದಾಗಿ ಪಿಕಪ್ ವಾಹನವನ್ನು ತಡೆ ಬೇಧೀಸಿ ಸಾಗಿಸಲು ಪ್ರಯತ್ನಿಸಿದ ಪರಿಣಾಮ ಪಿಕಪ್ ವಾಹನದ ಮುಂಭಾಗ ತಡೆ ಬೇಲಿಗೆ ಸಿಲುಕಿಕೊಂಡು ವಾಹನ ಹಿಂದೆಯೂ ಮುಂದೆಯೂ ಚಲಿಸಲಾರದೆ ಅಲ್ಲೇ ನಿಲ್ಲುವಂತಾಗಿದೆ.
ಪಿಕಪ್ ವಾಹನ ತಡೆ ಬೇಲಿಗೆ ಸಿಲುಕಿ ಸಂಚರಿಸಲಾಗದೆ ಸೇತುವೆ ಆರಂಭದಲ್ಲಿ ನಿಂತುಕೊಂಡ ಪರಿಣಾಮ ಇತರ ಲಘು ವಾಹನಗಳ ಸಂಚಾರ ಸಾಧ್ಯವಾಗದೆ ಸೇತುವೆ ಮೇಲೆ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಕಾರ್ಯಪ್ರವೃತ್ತರಾದ ಸ್ಥಳೀಯ ಯುವಕರು ಟೆಕ್ನಿಕಲ್ ಬುದ್ದಿ ಉಪಯೋಗಿಸಿ ಪಿಕಪ್ ವಾಹನದ ಚಕ್ರದ ಗಾಳಿ ತೆಗೆದು ಹಾಗೂ ಪಿಕಪ್ ವಾಹನದ ರಾಡ್ ಹಿಡಿದು ನೇತಾಡಿ ಬಗ್ಗಿಸುವ ಮೂಲಕ ತಡೆಬೆಲಿಗೆ ಸಿಲುಕಿದ ವಾಹನವನ್ನು ಹೊರೆಗೆಳೆದು ಸುರಕ್ಷಿತ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
0 comments:
Post a Comment