ಮಂಗಳೂರು, ಮಾರ್ಚ್ 11, 2024 (ಕರಾವಳಿ ಟೈಮ್ಸ್) : ಮುಸ್ಲಿಮರ ಪವಿತ್ರ ರಮಳಾನ್ ತಿಂಗಳ ಚಂದ್ರದರ್ಶನ ಸೋಮವಾರ ರಾತ್ರಿ ಆಗಿದ್ದು, ಮಂಗಳವಾರ (ಮಾರ್ಚ್ 12) ದಿಂದ ರಮಳಾನ್ ಉಪವಾಸ ವೃತ ಆರಂಭವಾಗಲಿದೆ ಎಂದು ಖಾಝಿಗಳಾದ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್, ಅಲ್-ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹಾಗೂ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರು ಘೋಷಿಸಿದ್ದಾರೆ.
ಮಂಗಳವಾರದಿಂದ ಮುಂದಿನ ಒಂದು ತಿಂಗಳ ಕಾಲ ಮುಸ್ಲಿಮರು ಹಗಲು ವೇಳೆ ಕಡ್ಡಾಯ ಉಪವಾಸ ವೃತ ಕೈಗೊಳ್ಳಲಿದ್ದು, ರಾತ್ರಿ ಮಸೀದಿ-ಮನೆಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ನಡೆಸಲಿದ್ದಾರೆ. ರಮಳಾನ್ ಕೊನೆ ದಿನ ಶವ್ವಾಲ್ ಚಂದ್ರದರ್ಶನ ಆದ ಕೂಡಲೇ ಮುಸ್ಲಿಮರು ಪವಿತ್ರ ಈದುಲ್ ಫಿತ್ರ್ (ಪೆರ್ನಾಳ್) ಆಚರಿಸಲಿದ್ದಾರೆ.
ಗಲ್ಫ್ ರಾಷ್ಟ್ರಗಳಲ್ಲಿ ಸೋಮವಾರದಂದು ರಂಝಾನ್ ಆರಂಭ
ಸೌದಿ ಅರೇಬಿಯಾ, ಯುಎಇ ಮೊದಲಾದ ಗಲ್ಫ್ ರಾಷ್ಟ್ರಗಳಲ್ಲಿ ಭಾನುವಾರ ರಾತ್ರಿ ಚಂದ್ರದರ್ಶನವಾಗಿದ್ದು, ಸೋಮವಾರ (ಮಾರ್ಚ್ 11) ದಿಂದ ಪವಿತ್ರ ರಮಳಾನ್ ತಿಂಗಳ ಉಪವಾಸ ವೃತ ಆರಂಭಗೊಂಡಿದೆ.
0 comments:
Post a Comment