ಮಂಗಳೂರು, ಮಾರ್ಚ್ 29, 2024 (ಕರಾವಳಿ ಟೈಮ್ಸ್) : ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷರೂ, ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರೂ ಆಗಿರುವ ಬಿ ರಮಾನಾಥ ರೈ ಅವರು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳು ಹಾಗೂ ಬ್ಲಾಕ್ ವ್ಯಾಪ್ತಿಗಳಿಗೆ ಪ್ರಚಾರ ಸಮಿತಿಯ ನೂತನ ಉಸ್ತುವಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
ಬೆಳ್ತಂಗಡಿಗೆ ಶೇಖರ್ ಕುಕ್ಕೇಡಿ, ಮೂಡಬಿದ್ರೆಗೆ ಚಂದ್ರಹಾಸ ಸನಿಲ್, ಮಂಗಳೂರು ಉತ್ತರಕ್ಕೆ ಪದ್ಮನಾಭ ಬಿ ಎಲ್ ಪಿ, ಮಂಗಳೂರು ದಕ್ಷಿಣಕ್ಕೆ ನವೀನ್ ಆರ್ ಡಿ ಸೋಜ, ಮಂಗಳೂರು ಕ್ಷೇತ್ರಕ್ಕೆ ಹಾಜಿ ಯು ಕೆ ಮೋನು, ಬಂಟ್ವಾಳ ಕ್ಷೇತ್ರಕ್ಕೆ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪುತ್ತೂರು ಕ್ಷೇತ್ರಕ್ಕೆ ಹೇಮನಾಥ ಶೆಟ್ಟಿ ಕಾವು, ಸುಳ್ಯಕ್ಕೆ ವೆಂಕಪ್ಪ ಗೌಡ ಅವರನ್ನು ವಿಧಾನಸಭಾ ಕ್ಷೇತ್ರವಾರು ಉಸ್ತುವಾರಿಗಳಾಗಿ ನೇಮಿಸಲಾಗಿದೆ.
ಉಳಿದಂತೆ ಬ್ಲಾಕ್ ವ್ಯಾಪ್ತಿಯಲ್ಲಿ ಬೆಳ್ತಂಗಡಿ ನಗರಕ್ಕೆ ಶಾಹುಲ್ ಹಮೀದ್ ಕೆ ಕೆ, ಬೆಳ್ತಂಗಡಿ ಗ್ರಾಮೀಣಕ್ಕೆ ಶ್ರೀಮತಿ ಲೋಕೇಶ್ವರ ವಿನಯಚಂದ್ರ, ಮೂಡಬಿದ್ರೆಗೆ ಮೊಹಮ್ಮದ್ ಅಸ್ಲಂ, ಮುಲ್ಕಿಗೆ ರೀತೇಶ್ ಕುಮಾರ್, ಗುರುಪುರಕ್ಕೆ ಯು ಪಿ ಇಬ್ರಾಹಿಂ, ಸುರತ್ಕಲ್ ಗೆ ಸದಾಶಿವ ಶೆಟ್ಟಿ, ಮಂಗಳೂರು ದಕ್ಷಿಣಕ್ಕೆ ರಮಾನಂದ ಪೂಜಾರಿ, ಮಂಗಳೂರು ನಗರಕ್ಕೆ ಉದಯ ಆಚಾರ್ಯ, ಉಳ್ಳಾಲಕ್ಕೆ ದಿನೇಶ್ ರೈ, ಮುಡಿಪುಗೆ ಚಂದ್ರಹಾಸ ಕರ್ಕೇರ, ಬಂಟ್ವಾಳಕ್ಕೆ ಜಗದೀಶ್ ಕೊಯಿಲ, ಪಾಣೆಮಂಗಳೂರಿಗೆ ಅನ್ವರ್ ಕರೋಪಾಡಿ, ಪುತ್ತೂರಿಗೆ ನವೀನ್ ರೈ, ವಿಟ್ಲ-ಉಪ್ಪಿನಂಗಡಿಗೆ ರಮಾನಾಥ ವಿಟ್ಲ, ಸುಳ್ಯಕ್ಕೆ ಸಂಶುದ್ದೀನ್, ಕಡಬ ಬ್ಲಾಕ್ ಗೆ ಬಾಲಕೃಷ್ಣ ಬಲ್ಲೇರಿ ಅವರುಗಳನ್ನು ಬ್ಲಾಕ್ ವ್ಯಾಪ್ತಿಗಳಿಗೆ ಕಾಂಗ್ರೆಸ್ ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಿಸಿ ರಮಾನಾಥ ರೈ ಆದೇಶಿಸಿದ್ದಾರೆ.
0 comments:
Post a Comment