ಬಂಟ್ವಾಳ, ಮಾರ್ಚ್ 08, 2024 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ಬಿ ಸಿ ರೋಡು ಸಮೀಪದ ಗೂಡಿನಬಳಿ-ಚಿಕ್ಕಯಮಠ ಎಂಬಲ್ಲಿನ ಜನವಸತಿ ಪ್ರದೇಶದ ಗುಡ್ಡಕ್ಕೆ ಶುಕ್ರವಾರ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಬಂಟ್ವಾಳ ಕಂದಾಯ ಇಲಾಖೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳ ಸಕಾಲಿಕ ಕಾರ್ಯಾಚರಣೆಯಿಂದ ಸಂಭಾವ್ಯ ಅಪಾಯ ಸ್ವಲ್ಪದರಲ್ಲೇ ತಪ್ಪಿದೆ.
ಇಲ್ಲಿನ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ಶುಕ್ರವಾರ ನಡೆದಿದ್ದು, ಸ್ಥಳೀಯರು ಈ ಬಗ್ಗೆ ಬಂಟ್ವಾಳ ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದು, ಕಂದಾಯ ಇಲಾಖಾ ಸಿಬ್ಬಂದಿಗಳು ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿ ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ.
ಗುಡ್ಡದ ಸಮೀಪದಲ್ಲಿ ಹಲವು ವಾಸ್ತವ್ಯದ ಮನೆಗಳಿದ್ದು, ಹಠಾತ್ ಬೆಂಕಿ ಅವಘಡದಿಂದ ಸ್ಥಳೀಯ ನಿವಾಸಿಗಳು ಸಹಜವಾಗಿಯೇ ಆತಂಕಿತರಾಗಿದ್ದರು. ಆದರೆ ಇಲಾಖಾ ಸಿಬ್ಬಂದಿಗಳ ಸಕಾಲಿಕ ಕಾರ್ಯಾಚರಣೆಯು ಸ್ಥಳೀಯರನ್ನು ನಿಟ್ಟುಸಿರುವ ಬಿಡುವಂತೆ ಮಾಡಿದೆ.
ಬಂಟ್ವಾಳ ಅಗ್ನಿ ಶಾಮಕ ದಳದ ಸಹಾಯಕ ಠಾಣಾಧಿಕಾರಿ ರಾಜೇಶ್ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗ, ಕಂದಾಯ ಇಲಾಖಾ ಸಿಬ್ಬಂದಿಗಳಾದ ಕರಿಸಬಸಪ್ಪ ನಾಯಕ್, ಸದಾಶಿವ ಕೈಕಂಬ ಅವರು ಈ ಸಕಾಲಿಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
0 comments:
Post a Comment