ಪಿ.ಎಂ.ಎ. ಪಾಣೆಮಂಗಳೂರುಪ್ರಧಾನ ಸಂಪಾದಕ....
ಸಾಮಾಜಿಕ ಕಳಕಳಿಯನ್ನು ಹೊಂದಿರುವ ವ್ಯಕ್ತಿಗಳು ಸಮಾಜದ ಶೋಷಿತರ, ದಮನಿತರ ಪರವಾಗಿ ನಿಲ್ಲಲು ಹತ್ತು ಹಲವು ಸಾಮಾಜಿಕ ಸೇವಾ ರಂಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಸಾಮಾಜಿಕ ರಂಗದಲ್ಲಿ ಏನಾದರೂ ಕಿಂಚಿತ್ ಸೇವೆ ಸಲ್ಲಿಸಬೇಕು ಎಂಬ ವಿಪರೀತ ತುಡಿತ ಹೊಂದಿದ್ದ ನಾವು ಆಯ್ಕೆ ಮಾಡಿಕೊಂಡದ್ದು, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮ ಕ್ಷೇತ್ರವನ್ನು. ಸಮಾಜದ ಎಲ್ಲ ವರ್ಗದ ಜನರಿಂದ ಅನ್ಯಾಯ, ದಮನಕ್ಕೆ ಒಳಗಾಗುವ ಮಂದಿಯ ಪರವಾಗಿ ನಿಷ್ಠುರವಾಗಿ ಧ್ವನಿಯೆತ್ತಲು ಹಾಗೂ ಆ ಮೂಲಕ ಸಮಾಜದ ಕಟ್ಟಕಡೆಯ ಜನತೆಗೆ ಒಂದಿಷ್ಟಾದರೂ ನ್ಯಾಯವನ್ನು ಒದಗಿಸಿಕೊಟ್ಟು ಸೇವೆಯನ್ನು ಸಲ್ಲಿಸಬಹುದು ಎಂಬ ಏಕಮಾತ್ರ ಉದ್ದೇಶವೇ ಇದಕ್ಕೆ ಕಾರಣ.
ಮಾಸಿಕ, ಪಾಕ್ಷಿಕ, ದೈನಿಕ ಪತ್ರಿಕೆಗಳ ವರದಿಗಾರನಾಗಿ ಪತ್ರಿಕಾ ರಂಗಕ್ಕೆ ಕಾಲಿಟ್ಟು, ಬಳಿಕ ಸಮಾಜದಲ್ಲಿ ಅಕ್ಷರ ಕ್ರಾಂತಿಯ ಮೂಲಕ ಕಿಂಚಿತ್ ಸೇವೆ ಸಲ್ಲಿಸಲು ಸ್ವಂತ ನಿಲುವಿನ ಮಾಧ್ಯಮವೊಂದು ಬೇಕು ಎಂಬ ಮನಸ್ಸಿನ ಅಭಿಲಾಷೆಗೆ ಪೂರಕವಾಗಿ 2015 ರಲ್ಲಿ “ಕರಾವಳಿ ಟೈಮ್ಸ್” ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡು ಕಾರ್ಯಾರಂಭ ಮಾಡಿರುತ್ತೇವೆ. ನಮ್ಮ ಈ ಪತ್ರಿಕೆ 2015ರ ಸೆಪ್ಟೆಂಬರ್ 20 ರಂದು ಮೊದಲ ಸಂಚಿಕೆ ಪ್ರಕಟಗೊಂಡು ಮಾರುಕಟ್ಟೆಗೆ ಪ್ರವೇಶಿಸಿತ್ತು. ಹಲವು ಏಳು-ಬೀಳುಗಳನ್ನು ಕಂಡರೂ ಅವಿರತ ಪರಿಶ್ರಮ, ದಿಟ್ಟ ನಿರ್ಧಾರದ ಮೂಲಕ ಪತ್ರಿಕೆ 8 ಸಂವತ್ಸರಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಂತು 9ನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿರುವುದರ ಜೊತೆಗೆ ಆಧುನಿಕ ಮಾಧ್ಯಮಗಳ ಭರಾಟೆಗೆ ಹೊಂದಿಕೊಳ್ಳುವ ಅನಿವಾರ್ಯತೆಯನ್ನು ಮನಗಂಡು ಪತ್ರಿಕೆಯ ಅಂತರ್ ಜಾಲ (ವೆಬ್ ಪೋರ್ಟಲ್) ಆವೃತ್ತಿಯನ್ನು 2020 ರ ಮಾರ್ಚ್ ತಿಂಗಳಲ್ಲಿ ಪ್ರಾರಂಭಿಸಿ ಕಾರ್ಯಾರಂಭ ಮಾಡಿದ್ದೇವೆ. ಪತ್ರಿಕೆಯ ವೆಬ್ ಪೋರ್ಟಲ್ ಕೂಡಾ ಇದೀಗ 4 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ 5ನೇ ಸಂವತ್ಸರಕ್ಕೆ ಪಾದಾರ್ಪಣೆ ಮಾಡುತ್ತಿದೆ. ಜೊತೆಗೆ ವೆಬ್ ಪೋರ್ಟಲ್ ವೀಕ್ಷಕರ ಸಂಖ್ಯೆಯಯೂ 1 ಕೋಟಿ ಮೀರಿ ಮುನ್ನಡೆಯುತ್ತಿದೆ. ಇದರೊಂದಿಗೆ ಪೋರ್ಟಲ್ ಡಬ್ಬಲ್ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ.
ಸಮಾಜಕ್ಕೆ ಏನಾದರೂ ಸೇವೆ ಅಕ್ಷರ ಸಮರದ ಮೂಲಕವಾದರೂ ಆಗಬೇಕು ಎನ್ನುವ ನಿಟ್ಟಿನಲ್ಲಿ ಓದುಗರು, ಜಾಹೀರಾತುದಾರರು, ಹಿತೈಷಿಗಳು ಹಾಗೂ ಪೆÇೀಷಕರ ಸರ್ವ ವಿಧ ಸಹಕಾರದಿಂದ ಸಮಾಜದ ಏಳು-ಬೀಳುಗಳ ಬಗ್ಗೆ ಬೆಳಕು ಚೆಲ್ಲುತ್ತಾ, ಉತ್ತಮ ಕೆಲಸಕ್ಕೆ ಶಹಬ್ಬಾಸ್ ಗಿರಿ ಪಡೆಯುತ್ತಾ, ತಪ್ಪಿದಾಗ ಓದುರೇ ನೀಡುವ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕರಾವಳಿ ಟೈಮ್ಸ್ ತನ್ನದೇ ಆದ ಹಾದಿಯನ್ನು ತುಳಿಯುತ್ತಾ ಬರುತ್ತಿದೆ.
ಅಕ್ಷರ ಸಮರದಲ್ಲಿ ಯಾವುದೇ ಪ್ರಭಾವಗಳಿಗೂ ಮಣಿಯದೆ, ಯಾರದೇ ಮುಲಾಜಿಗೆ ಬಗ್ಗದೆ ನೇರ ಹಾಗೂ ದಿಟ್ಟ ನಿರ್ಧಾರವನ್ನೇ ಕರಾವಳಿ ಟೈಮ್ಸ್ ಪ್ರದರ್ಶಿಸುತ್ತಾ ಬಂದಿದೆ. ಮುಂದೆಯೂ ಅದೇ ಹಾದಿಯನ್ನು ಹಿಡಿಯುತ್ತಾ ಸಮಾಜದ ತಳಮಟ್ಟದ ಸಾಮಾನ್ಯ ವ್ಯಕ್ತಿಗೂ ಕೂಡಾ ನ್ಯಾಯ ಮರೀಚೆಕೆಯಾದರೆ ಪತ್ರಿಕೆ ಶೋಷಿತರ, ನ್ಯಾಯವಂಚಿತರ, ದಮನಿತರ ಪರ ಯಾವತ್ತೂ ನಿಲ್ಲುತ್ತದೆ ಎಂಬ ಭರವಸೆಯನ್ನು ನೀಡುವುದರ ಜೊತೆಗೆ ಆಧುನಿಕ ಮಾಧ್ಯಮ ರಂಗದಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗುವ ಯಾವುದೇ ನಾಗಾಲೋಟ ಬಯಸದೆ, ಯಾರೊಂದಿಗೂ ಸ್ಪರ್ಧೆಗೆ ಇಳಿಯದೆ, ಯಾವುದೇ ಬ್ರೇಕಿಂಗ್, ಶಾಕಿಂಗ್ ರೂಪದಲ್ಲಿರುವ ಊಹಾಪೋಹ ಪ್ರೇರಿತ ಸುದ್ದಿಗಳ ಹಿಂದೆ ಬೀಳದೆ ನಿಖರ ಹಾಗೂ ನಿಷ್ಠುರ ವರದಿಗಾರಿಕೆ ಮೂಲಕ ಜನಸಾಮಾನ್ಯರ ಧ್ಬನಿಯಾಗಿಯಷ್ಟೆ ಮುಂದೆಯೂ ಕಾರ್ಯನಿರ್ವಹಿಸಲಿದ್ದೇವೆ. ಜಾತಿ-ಧರ್ಮ, ಭಾಷೆ, ಪಂಥ, ವರ್ಗ ಎಲ್ಲವನ್ನೂ ಮೀರಿ ಪತ್ರಿಕಾ ಧರ್ಮ ಹಾಗೂ ಮಾನವೀಯ ಮೌಲ್ಯದ ಜಾತಿಯನ್ನಷ್ಟೇ ಅಪ್ಪಿಕೊಂಡು, ಒಪ್ಪಿಕೊಂಡು ಸಮಾಜದ ಆಗು-ಹೋಗುಗಳಿಗೆ ಸ್ಪಂದಿಸುತ್ತಾ ಮುದ್ರಿತ ಹಾಗೂ ಅಂತರ್ ಜಾಲ ಪತ್ರಿಕೆಯನ್ನು ಮುನ್ನಡೆಸುತ್ತಾ ಬರಲು ಬದ್ದರಾಗಿದ್ದೇವೆ ಎಂಬ ಭರವಸೆಯನ್ನು ನಮ್ಮೆಲ್ಲಾ ಓದುಗ ಪ್ರಭುಗಳಿಗೆ ನೀಡುತ್ತಾ .... ನಮ್ಮ ದೃಢ ಹೆಜ್ಜೆಗೆ ನಿಮ್ಮೆಲ್ಲರ ಸಹಕಾರ, ಪ್ರೀತಿಯ ಹಾರೈಕೆ ಕರಾವಳಿ ಟೈಮ್ಸ್ ಪತ್ರಿಕೆಯ ಮೇಲಿರಲಿ ಎಂಬ ಕಳಕಳಿಯ ವಿನಂತಿಯೊಂದಿಗೆ,
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಗುರುತಿಸಿಕೊಂಡಿರುವ ಮಾಧ್ಯಮ ರಂಗಕ್ಕೆ ಸಮಾಜದಲ್ಲಿ ಮಹತ್ವದ ಪಾತ್ರವಿದೆ. ‘ಗನ್’ ನಿಂದ ಬದಲಾಯಿಸಲಾಗದ್ದನ್ನು ‘ಪೆನ್’ ನಿಂದ ಬದಲಾಯಿಸಲು ಸಾಧ್ಯವಿದೆ ಎಂಬುದು ಹಿಂದಿನಿಂದಲೂ ಜನಜನಿತ. ಈ ನಿಟ್ಟಿನಲ್ಲಿ ಸಮಾಜದ ಅಂಕು-ಡೊಂಕುಗಳ ಬಗ್ಗೆ ಒಂದಷ್ಟು ಬೆಳಕು ಚೆಲ್ಲಿ ಆ ಮೂಲಕ ಸುವ್ಯವಸ್ಥಿತವಾಗಿ ಮುನ್ನಡೆಸುವ ಹಾಗೂ ಸಮಾಜಕ್ಕೆ ಲೇಖನಿ ಮೂಲಕ ಏನಾದರೂ ನೀಡಲು ಮುಂದೆಯೂ ಬದ್ದರಾಗಿದ್ದೇವೆ
ಮಾಸಿಕ, ಪಾಕ್ಷಿಕ, ದೈನಿಕ ಪತ್ರಿಕೆಗಳ ವರದಿಗಾರನಾಗಿ ಮಾಧ್ಯಮ ಕ್ಷೇತ್ರಕ್ಕೆ ಎಂಟ್ರಿಕೊಟ್ಟು, ಲೇಖನಿ ಮೂಲಕ ಕೆಲವೊಂದು ಅಭಿಪ್ರಾಯಗಳನ್ನು ಸಮಾಜದ ಮುಂಚೆ ಹಂಚಿಕೊಂಡು, ಬಳಿಕ ಸಮಾಜದಲ್ಲಿ ಮಾಧ್ಯಮ ಕ್ಷೇತ್ರದ ಮೂಲಕ ಸ್ವಂತ ಧ್ವನಿಯಾಗಬೇಕೆಂಬ ಅದಮ್ಯ ಬಯಕೆಯಿಂದ ಆಲೋಚಿಸಿದಾಗ ಮನಸ್ಸಿನಲ್ಲಿ ಕಂಡು ಬಂದದ್ದೇ ಸ್ವಂತ ಪತ್ರಿಕೆ ಪ್ರಾರಂಭಿಸುವ ಉತ್ಸುಕತೆ. ಇದರ ಪ್ರತಿರೂಪವಾಗಿ “ಕರಾವಳಿ ಟೈಮ್ಸ್” ಇದೀಗ ನಿಮ್ಮ ಬೆರಳ ತುದಿಯಲ್ಲಿ ಸದಾ ತೆರದುಕೊಳ್ಳುತ್ತಿದೆ...
ದೊಡ್ಡ ದೊಡ್ಡ ಪತ್ರಿಕೋದ್ಯಮಗಳ ಮುಂದೆ ಸಣ್ಣ ಪತ್ರಿಕೆಗಳು ವರ್ಷ ಪೂರೈಸುವುದೇ ದುಸ್ತರ ಎಂಬ ಸನ್ನಿವೇಶದಲ್ಲಿ ನಮ್ಮ ಕರಾವಳಿ ಟೈಮ್ಸ್ ಪತ್ರಿಕೆ ಹಲವು ಏಳು-ಬೀಳುಗಳನ್ನು ಕಂಡರೂ ಅವಿರತ ಶ್ರಮ, ದಿಟ್ಟ ಹೆಜ್ಜೆ, ರಾಜಿ ರಹಿತ ಹೋರಾಟದ ಮೂಲಕ ವರ್ಷಗಳನ್ನು ಸವೆಸಿ ಮುಂದಡಿ ಇಡುತ್ತಿದೆ... ಇದಕ್ಕೆ ಪತ್ರಿಕೆಯ ಓದುಗರ, ಜಾಹೀರಾತುದಾರರ, ಪೆÇೀಷಕರ, ಹಿತೈಷಿಗಳ ತುಂಬು ಹೃದಯದ ಸಹಕಾರವೇ ಪ್ರಮುಖ ಕಾರಣವಾಗಿದೆ ಎಂಬುದನ್ನು ಒತ್ತಿ ಹೇಳಲೇಬೇಕಾಗಿದೆ. ನಮ್ಮೀ ಅಕ್ಷರ ಸೇವೆಗೆ ನಮ್ಮೆಲ್ಲರ ಓದುಗರು ಉತ್ತಮ ಕೆಲಸಕ್ಕೆ ಶಹಬ್ಬಾಸ್‍ಗಿರಿ ನೀಡುತ್ತಾ, ತಪ್ಪಿದಾಗ ಎಚ್ಚರಿಸುವ ಮೂಲಕ ಕರಾವಳಿ ಟೈಮ್ಸ್ ಅಭಿವೃದ್ದಿಗೆ ಸಹಕರಿಸಿದ್ದೀರಿ... ಮುಂದೆಯೂ ತಮ್ಮೆಲ್ಲರ ಸಹಕಾರ, ಪ್ರೀತಿಯ ಹಾರೈಕೆ ಕರಾವಳಿ ಟೈಮ್ಸ್ ಪತ್ರಿಕೆಯ ಮೇಲೆ ಸದಾ ಇರಲಿ ಎಂಬ ವಿನಮ್ರ ವಿನಂತಿಯೊಂದಿಗೆ.....
ಪಿ.ಎಂ.ಎ. ಪಾಣೆಮಂಗಳೂರು
ಪ್ರಧಾನ ಸಂಪಾದಕ....
0 comments:
Post a Comment