ಬೆಳ್ತಂಗಡಿ : ಪೆಟ್ರೋನೆಟ್ ಕಂಪೆನಿಯ ಪೈಪ್ ಲೈನ್ ಕೊರೆದು ಲಕ್ಷಾಂತರ ರೂಪಾಯಿ ಮೌಲ್ಯದ ಡೀಸೆಲ್ ಕಳವು - Karavali Times ಬೆಳ್ತಂಗಡಿ : ಪೆಟ್ರೋನೆಟ್ ಕಂಪೆನಿಯ ಪೈಪ್ ಲೈನ್ ಕೊರೆದು ಲಕ್ಷಾಂತರ ರೂಪಾಯಿ ಮೌಲ್ಯದ ಡೀಸೆಲ್ ಕಳವು - Karavali Times

728x90

22 March 2024

ಬೆಳ್ತಂಗಡಿ : ಪೆಟ್ರೋನೆಟ್ ಕಂಪೆನಿಯ ಪೈಪ್ ಲೈನ್ ಕೊರೆದು ಲಕ್ಷಾಂತರ ರೂಪಾಯಿ ಮೌಲ್ಯದ ಡೀಸೆಲ್ ಕಳವು

ಬೆಳ್ತಂಗಡಿ, ಮಾರ್ಚ್ 22, 2024 (ಕರಾವಳಿ ಟೈಮ್ಸ್) : ಪೆಟ್ರೋನೆಟ್ ಕಂಪೆನಿಗೆ ಸೇರಿದ ಡೀಸೆಲ್ ಪೈಪ್ ಲೈನ್ ಕೊರೆದು ಲಕ್ಷಾಂತರ ರೂಪಾಯಿ ಮೌಲ್ಯದ ಡೀಸೆಲ್ ಕಳವು ನಡೆಸಿದ ಘಟನೆ ಪುದುವೆಟ್ಟು ಗ್ರಾಮದ ಆಲಡ್ಕ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ಬಗ್ಗೆ ಪೆಟ್ರೋನೆಟ್ ಎಚ್ ಬಿ ಲಿಮಿಟೆಡ್ ಕಂಪೆನಿಯ ನೆರಿಯಾ ಸ್ಟೇಶನ್ ಇನ್ ಚಾರ್ಜ್ ಆಗಿರುವ ಕೇರಳ ರಾಜ್ಯದ ಆಲಪ್ಪುಝ ಜಿಲ್ಲೆಯ ಮಾವೆಲಿಕರ ನಿವಾಸಿ ರಾಜನ್ ಜಿ ಅವರು ಧಮಸ್ಥಳ ಪೊಲೀಸರಿಗೆ ದೂರು ನೀಡಿದ್ದು, ಮಂಗಳೂರು ಹಾಸನ ಮತ್ತು ಬೆಂಗಳೂರಿಗೆ ಪೆಟ್ರೋನೆಟ್ ಪೈಫ್ ಮೂಲಕ ಡಿಸೇಲ್ ಸರಬರಾಜು ಆಗುತ್ತಿದ್ದು, ಮಾ 16 ರ ರಾತ್ರಿಯಿಂದ ರಿಂದ 19 ರ ರಾತ್ರಿಯ ಮಧ್ಯದ ಅವಧಿಯಲ್ಲಿ ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ ಆಲಡ್ಕ ಎಂಬಲ್ಲಿಂದ ಹಾದು ಹೋಗುವ ಡಿಸೇಲ್ ಪೈಫ್ ಲೈನ್ ಕೊರೆದ ಕಳ್ಳರು 2.5 ಇಂಚು ಎಚ್ ಡಿ ಪಿ ಇ ಪೈಪ್ ಮೂಲಕ ಅಂದಾಜು 12 ಸಾವಿರ ಲೀಟರ್ ಡಿಸೇಲ್ ಕಳವು ಮಾಡಿದ್ದಾರೆ, ಕಳವಾಗಿರುವ ಡೀಸೆಲ್ ಅಂದಾಜು ಮೌಲ್ಯ 9.60 ಲಕ್ಷ ರೂಪಾಯಿ ಆಗಿದೆ. ಈ ಬಗ್ಗೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 19/2024 ಕಲಂ 427, 285, 379 ಐಪಿಸಿ ಕಲಂ 15(2) ಪೆಟ್ರೊನೆಟ್ ಕಾಯ್ದೆ ಕಲಂ 3(2) ಪ್ರಿವೆನ್ಸೆನ್ ಆಫ್ ಡ್ಯಾಮೆಜ್ ಟು ಪಬ್ಲಿಕ್ ಪ್ರಾಪರ್ಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬೆಳ್ತಂಗಡಿ : ಪೆಟ್ರೋನೆಟ್ ಕಂಪೆನಿಯ ಪೈಪ್ ಲೈನ್ ಕೊರೆದು ಲಕ್ಷಾಂತರ ರೂಪಾಯಿ ಮೌಲ್ಯದ ಡೀಸೆಲ್ ಕಳವು Rating: 5 Reviewed By: karavali Times
Scroll to Top