ಪುತ್ತೂರು, ಮಾರ್ಚ್ 13, 2024 (ಕರಾವಳಿ ಟೈಮ್ಸ್) : ಪುತ್ತೂರು ಯೂನಿಯನ್ ಬ್ಯಾಂಕ್ ಶಾಖೆಯಿಂದ ರಾತೋರಾತ್ರಿ ವಾಮಮಾರ್ಗದಿಂದ ಹಣ ಎಗರಿಸಿದ ಬಗ್ಗೆ ಮಹಿಳೆಯೋರ್ವರು ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪುತ್ತೂರು-ಚಿಕ್ಕಮಡ್ನೂರು ನಿವಾಸಿ ಐಡಾ ಶಾಂತಿ ಲೋಬೊ (43) ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇವರು ಪುತ್ತೂರಿನ ದರ್ಬೆಯಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದು, ಸದ್ರಿ ಖಾತೆಯಿಂದ ಫೆಬ್ರವರಿ 2 ರಂದು ರಾತ್ರಿ ಸಮಯ 13 ಸಾವಿರ ರೂಪಾಯಿ ಹಣ ಕಡಿತಗೊಂಡಿರುವ ಬಗ್ಗೆ ಮೊಬೈಲಿಗೆ ಸಂದೇಶ ಬಂದಿರುತ್ತದೆ. ಅದರಂತೆ ಖಾತೆಯಿಂದ ಯಾರೋ ಅಪರಿಚಿತ ವ್ಯಕ್ತಿ ಯಾವುದೋ ರೀತಿ ವಂಚಿಸಿ ಹಣ ಪಡೆದುಕೊಂಡಿರುತ್ತಾರೆ ಎಂದು ನೀಡಿದ ದೂರಿನಂತೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 21/2024 ಕಲಂ 420 ಐಪಿಸಿ ಮತ್ತು 66 (ಸಿ), 66 (ಡಿ ) ಐಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment