ಬಂಟ್ವಾಳ, ಮಾರ್ಚ್ 02, 2024 (ಕರಾವಳಿ ಟೈಮ್ಸ್) : ನಿರ್ಮಾಣ ಹಂತದ ಮನೆಯಲ್ಲಿ ಜಾನುವಾರು ವಧೆ ಮಾಡಿ ಮಾಂಸ ಮಾಡುತ್ತಿದ್ದ ಪ್ರಕರಣ ಬೇಧಿಸಿದ ಪೂಂಜಾಲಕಟ್ಟೆ ಠಾಣಾ ಪೊಲೀಸರು ಜಾನುವಾರು ಮಾಂಸ ಸಹಿತ ಇತರ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಕಾವಳಮೂಡೂರು ಗ್ರಾಮದ ಧೂಮಳಿಕೆ ಎಂಬಲ್ಲಿ ಶನಿವಾರ ನಡೆದಿದೆ. ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಆರೋಪಿಗಳು ಪೊಲೀಸರಿಂದ ತಪ್ಪಿಸಿ ಪರಾರಿಯಾಗಿದ್ದಾರೆ.
ಪರಾರಿಯಾದ ಆರೋಪಿಗಳನ್ನು ಇಲ್ಯಾಸ್ ಧೂಮಳಿಕೆ ಯಾನೆ ಕುಂಟ ಇಲ್ಯಾಸ್ ಹಾಗೂ ಇಲ್ಯಾಸ್ ಬಂಗೇರಕರೆ ಎಂದು ಹೆಸರಿಸಲಾಗಿದೆ.
ಕಾವಳಮುಡೂರು ಗ್ರಾಮದ ಧೂಮಳಿಕೆ ಎಂಬಲ್ಲಿ ಆರೋಪಿಗಳು ಇಲ್ಯಾಸ್ ಧೂಮಳಿಕೆ ಎಂಬಾತನ ನಿರ್ಮಾಣ ಹಂತದ ಮನೆಯಲ್ಲಿ, ಜಾನುವಾರನ್ನು ವಧೆ ಮಾಡಿ ಮಾಂಸ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪುಂಜಾಲಕಟ್ಟೆ ಪಿಎಸ್ಐ ಉದಯರವಿ ವೈ ಎಂ ನೇತೃತ್ವದ ಪೊಲೀಸರು ಈ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಪೊಲೀಸರು ಸ್ಥಳದಲ್ಲಿದ್ದ ಸುಮಾರು 60 ಕೆ ಜಿ ಜಾನುವಾರು ಮಾಂಸ ಮತ್ತು ಇತರೆ ಅಂಗಾಗಗಳು, ಎಲೆಕ್ಟ್ರಿಕ್ ತೂಕದ ಯಂತ್ರ, ಮಾಂಸಕ್ಕೆ ಉಪಯೋಗಿಸುವ ಇತರೆ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಆರೋಪಿಗಳ ವಿರುದ್ದ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment