ಬೆಳ್ತಂಗಡಿ, ಮಾರ್ಚ್ 11, 2024 (ಕರಾವಳಿ ಟೈಮ್ಸ್) : ಸಿಬ್ಬಂದಿಗಳೊಂದಿಗೆ ರೌಂಡ್ಸ್ ನಲ್ಲಿದ್ದ ವೇಣೂರು ಪೊಲೀಸ್ ಠಾಣಾ ಎಎಸ್ಸೈ ರಾಮಯ್ಯ ಹೆಗ್ಡೆ (57) ಅವರಿಗೆ ರಸ್ತೆಯಲ್ಲಿ ಸೇರಿದ್ದ ಗುಂಪೊಂದು ಹಲ್ಲೆ ನಡೆಸಿ ಬೈದು ಜೀವ ಬೆದರಿಕೆ ಒಡ್ಡಿದ ಘಟನೆ ತೆಂಕಕಾರಂದೂರು ಗ್ರಾಮದ ಗುಂಡೇರಿ ಎಂಬಲ್ಲಿ ಮಾ 9 ರಂದು ನಡೆದಿದೆ.
ಮಾರ್ಚ್ 9 ರಂದು ಬೆಳಗ್ಗಿನ ಜಾವ ವೇಣೂರು ಪೆÇಲೀಸ್ ಠಾಣಾ ಎಎಸ್ಸೈ ರಾಮಯ್ಯ ಹೆಗ್ಡೆ ಅವರು ಠಾಣಾ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ತೆಂಕಕಾರಂದೂರು ಗ್ರಾಮದ ಗುಂಡೇರಿ ಎಂಬಲ್ಲಿ, ಗುರುವಾಯನಕೆರೆ-ನಾರಾವಿ ರಸ್ತೆಯ ಬದಿ ಸುಮಾರು 6-7 ಜನ ನಿಂತುಕೊಂಡಿದ್ದು, ರಸ್ತೆಯಲ್ಲಿ ಸೋಡಾ ಬಾಟಲಿ ಪುಡಿಯಾಗಿರುವುದು ಕಂಡುಬಂದಿರುತ್ತದೆ.
ಈ ಬಗ್ಗೆ ಎಎಸೈ ಅವರು ವಿಚಾರಿಸಿದಾಗ, ಆರೋಪಿ ಮಹೇಶ್ ಎಂಬಾತ ಅವ್ಯಾಚವಾಗಿ ಬೈದು, ಕೊಲೆಗೆ ಯತ್ನಿಸಿರುತ್ತಾನೆ. ಆತನೊಂದಿಗೆ ಇದ್ದ ಇತರ ಆರೋಪಿಗಳು ಸೇರಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾರೆ.
ಹಲ್ಲೆಯಿಂದ ಗಾಯಗೊಂಡ ರಾಮಯ್ಯ ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ವೇಣೂರು ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 24/2024 ಕಲಂ 143, 147, 332, 353, 307, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment