ಬಂಟ್ವಾಳ, ಮಾರ್ಚ್ 11, 2024 (ಕರಾವಳಿ ಟೈಮ್ಸ್) : ಸಂಚಾರ ನಿಯಮ ಉಲ್ಲಂಘಿಸಿದ ಅಟೋ ರಿಕ್ಷಾವನ್ನು ವಶಕ್ಕೆ ಪಡೆದು ದಂಡ ವಿಧಿಸಿದ ಪೊಲೀಸರ ವಿರುದ್ದ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಇಲಾಖಾ ವಾಹನ ಹಾಗೂ ಅಟೋ ರಿಕ್ಷಾಕ್ಕೆ ಚಾಲಕ ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಬಿ ಸಿ ರೋಡು ಸಮೀಪದ ಕೈಕಂಬ ಜಂಕ್ಷನ್ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ವಾಹನಕ್ಕೆ ಬೆಂಕಿ ಹಚ್ಚಲು ಯತ್ನಿಸಿದ ಆರೋಪಿಯನ್ನು ಗೂಡಿನಬಳಿ ನಿವಾಸಿ ಮುಹಮ್ಮದ್ ಅನ್ಸಾರ್ ಎಂದು ಹೆಸರಿಸಲಾಗಿದೆ. ಸೋಮವಾರ ಬೆಳಿಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣಾ ಪಿಎಸ್ಸೈ ಸುತೇಶ್ ಕೆ ಪಿ ಅವರು ಠಾಣಾ ಸಿಬ್ಬಂದಿಗಳೊಂದಿಗೆ ಬಿ ಮೂಡ ಗ್ರಾಮದ ಕೈಕಂಬ ಜಂಕ್ಷನ್ ಬಳಿ ಸಂಚಾರ ನಿಯಂತ್ರಣ ಹಾಗೂ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಗೂಡಿನಬಳಿ ನಿವಾಸಿ ಮಹಮ್ಮದ್ ಅನ್ಸಾರ್ ಎಂಬಾತ ಕೆಎ-70-2775 ನೋಂದಣಿ ಸಂಖ್ಯೆಯ ಅಟೋ ರಿಕ್ಷಾದಲ್ಲಿ ಸಮವಸ್ತ್ರ ಧರಿಸದೆ ಮೊಬೈಲ್ ಫೆÇೀನ್ ಬಳಸಿಕೊಂಡು ರಿಕ್ಷಾ ಚಲಾಯಿಸಿಕೊಂಡು ಬಂದಿದ್ದಾನೆ. ಈ ಸಂದರ್ಭ ಅಟೋ ರಿಕ್ಷಾವನ್ನು ನಿಲ್ಲಿಸಿದ ಪೊಲೀಸರು ಸಂಚಾರ ನಿಯಮ ಉಲ್ಲಂಘನೆಯ ಬಗ್ಗೆ ಚಾಲಕಗೆ ತಿಳಿಸಿದ್ದು, ಅಟೋ ರಿಕ್ಷಾ ಚಾಲಕ ಈ ಸಂದರ್ಭ ತನ್ನ ತಪ್ಪನ್ನು ಒಪ್ಪಿಕೊಂಡಿದ್ದ. ಚಾಲಕನಲ್ಲಿ ಸಂಚಾರಿ ನಿಯಮಗಳ ಉಲ್ಲಂಘಿಸಿದ್ದಕ್ಕಾಗಿ ದಂಡ ಪಾವತಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಈ ಸಂದರ್ಭ ದಂಡ ಪಾವತಿ ಮಾಡಲು ಹಣವಿಲ್ಲ ಎಂದು ಚಾಲಕ ತಿಳಿಸಿದ ಹಿನ್ನಲೆಯಲ್ಲಿ ಪೊಲೀಸರು ಚಾಲಕನ ಡಿಎಲ್ ಹಾಗೂ ವಾಹನದ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದ್ದಾರೆ. ಆತನ ಬಳಿ ಯಾವುದೇ ದಾಖಲೆಗಳು ಇಲ್ಲವೆಂದು ತಿಳಿಸಿದ ಮೇರೆಗೆ, ಆತನಿಗೆ ನೋಟಿಸು ನೀಡಿದ ಪೊಲೀಸರು ಆತನ ಸಹಿಯನ್ನು ಪಡೆದು ಆಟೋ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂದರ್ಭ ಅಟೋ ಚಾಲಕ ದಂಡದ ಹಣ ಮತ್ತು ದಾಖಲಾತಿ ತರುವುದಾಗಿ ಹೇಳಿ ಅಲ್ಲಿಂದ ಹೋಗಿದ್ದು, ಸ್ವಲ್ಪ ಸಮಯದ ಬಳಿಕ ವಾಪಾಸು ಬಂದು, ಆಟೋ ರಿಕ್ಷಾ ಸೀಝ್ ಮಾಡಿರುವ ಬಗ್ಗೆ ತಕರಾರು ತೆಗೆದು ಪಿಎಸ್ಸೈ ಅವರ ಇಲಾಖಾ ವಾಹನಕ್ಕೆ ಮತ್ತು ಆತನ ಅಟೋ ರಿಕ್ಷಾಕ್ಕೆ ಪ್ಲಾಸ್ಟಿಕ್ ಬಾಟಲಿಯಲ್ಲಿ ತಾನು ತಂದಿದ್ದ ಪೆಟ್ರೋಲ್ ಎರಚಿ ಬೆಂಕಿ ಹಚ್ಚಲು ಪ್ರಯತ್ನಿಸಿ ರಂಪಾಟ ನಡೆಸಿದ್ದಾರೆ. ಪೊಲೀಸರು ಆತನನ್ನು ತಡೆದು, ವಶಕ್ಕೆ ಪಡೆಯಲು ಪ್ರಯತ್ನಿಸಿದಾಗ, ಆತ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಖ 53/2024 ಕಲಂ 308, 353 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment