ಬಂಟ್ವಾಳ, ಮಾರ್ಚ್ 13, 2024 (ಕರಾವಳಿ ಟೈಮ್ಸ್) : ಕೃಷಿಯೇತರ ಜಮೀನಿನ ಜಮೀನಿನಲ್ಲಿ ಹಾಳಾದ ಬೇಲಿಯ ಕಂಬಗಳನ್ನು ರಿಪೇರಿ ಮಾಡುತ್ತಿದ್ದ ವೇಳೆ ಅಕ್ರಮ ಪ್ರವೇಶಗೈದ ತಂಡ ಜಮೀನು ಮಾಲಕಗೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ್ದಲ್ಲದೆ ಬೇಲಿ ಹಾಗೂ ಕೃಷಿ-ಕೃತಗಳಿಗೆ ಹಾನಿಮಾಡದ ಘಟನೆ ಕಳ್ಳಿಗೆ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಮಾರ್ಷೆಲ್ ಡಿ ಸೋಜ ಬಿನ್ ಲಾದ್ರು ಡಿ’ಸೋಜ ಎಂಬವರೇ ಹಲ್ಲೆಗೊಳಗಾದ ಜಮೀನು ಮಾಲಕ. ಆರೋಪಿಗಳನ್ನು ಜೆರಾಲ್ಡ್ ಗ್ರೇಶನ್ ಡಿ ಸೋಜ, ಅಂದ್ರು ಡಿ ಸೋಜ, ಚಾಲ್ರ್ಸ್ ಡಿ ಸೋಜ, ಅಸ್ಟಿನ್ ಡಿ ಸೋಜ ಎಂದು ಹೆಸರಿಸಲಾಗಿದೆ.
ಮಾರ್ಷೆಲ್ ಡಿಸೋಜ ಅವರು ಕಳ್ಳಿಗೆ ಗ್ರಾಮದಲ್ಲಿ ಕೃಷಿಯೇತರ ಜಾಗದಲ್ಲಿ ಮನೆ ನಿರ್ಮಿಸಿ ವಾಸಿಸಿಕೊಂಡು ಬರುತ್ತಿದ್ದು, ತಮ್ಮ ಜಾಗದ ಸುತ್ತಲೂ ಅಳವಡಿಸಿದ್ದ ಬೇಲಿಯ ಒಂದು ಭಾಗದಲ್ಲಿ ಹಾಳಾಗಿದ್ದ ಕಾರಣ ಬೇಲಿಯ ಕಂಬಗಳನ್ನು ರಿಪೇರಿ ಮಾಡುತ್ತಿರುವ ಸಂದರ್ಭ ಏಕಾಏಕಿ ಜಮೀನಿಗೆ ಅಕ್ರಮ ಪ್ರವೇಶಗೈದ ಆರೋಪಿಗಳ ತಂಡ ಮಾಲಕಗೆ ಬೇದರಿಕೆ ಒಡ್ಡಿ ಹಲ್ಲೆ ನಡೆಸಿರುತ್ತಾರೆ. ಅಲ್ಲದೆ ಬೇಲಿ ಮತ್ತು ಕೃಷಿ ಕೃತಗಳಿಗೆ ಹಾನಿಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಸುಮಾರು 5 ಸಾವಿರ ರೂಪಾಯಿ ನಷ್ಟ ಉಂಟಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 54/2024 ಕಲಂ 447, 504, 324, 506, 247 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
href="https://blogger.googleusercontent.com/img/b/R29vZ2xl/AVvXsEiW5CXlaIlGZoZEosyZofvc0kfQS7H0Bbdh16Yh8l_BqPwMXVa01clxw7QJ0ThpLeyLaEqyC4TlotLyWSjIfu3dUU0liLrwf6LNVmX72XKfo4n3ZTMwhYjqBQcfZHyJlHvPXHMdfc7fyQz563VsOdbtckSb0ymmaulwrQzM1cS7KKwV5fdDU1q2CpFYwUiM/s1600/Add%201.jpg" style="display: block; padding: 1em 0; text-align: center; ">
0 comments:
Post a Comment