ಕಡಬ, ಮಾರ್ಚ್ 11, 2024 (ಕರಾವಳಿ ಟೈಮ್ಸ್) : ಮನೆಯ ಕಂಪೌಂಡ್ ಅಕ್ರಮವಾಗಿ ಕೆಡವುತ್ತಿರುವ ಬಗ್ಗೆ ಆಕ್ಷೇಪಿಸಿ ಮನೆ ಮಾಲಕಿಗೆ ಹಲ್ಲೆ ನಡೆಸಿದ ಘಟನೆ ಕಡಬ ತಾಲೂಕು, ಕೊಂಬಾರು ಗ್ರಾಮದಲ್ಲಿ ಭಾನುವಾರ ನಡೆದಿದೆ.
ಹಲ್ಲೆಯಿಂದ ಗಾಯಗೊಂಡ ಮನೆ ಮಾಲಕಿಯನ್ನು ಇಲ್ಲಿನ ನಿವಾಸಿ ಗಂಗಮ್ಮ (72) ಎಂದು ಹೆಸರಿಸಲಾಗಿದ್ದು, ಹಲ್ಲೆ ನಡೆಸಿದ ಆರೋಪಿಯನ್ನು ನೆರೆಕರೆ ನಿವಾಸಿ, ಸಂಬಂಧಿ ಶಶಿಧರ ಎಂದು ಗುರುತಿಸಲಾಗಿದೆ.
ಗಂಗಮ್ಮ ಅವರು ಭಾನುವಾರ ಬೆಳಿಗ್ಗೆ ಒಬ್ಬರೆ ಮನೆಯಲ್ಲಿದ್ದ ವೇಳೆ ನೆರೆಕೆರೆಯ ಸಂಬಂಧಿ ಆರೋಪಿ ಶಶಿಧರ ಎಂಬಾತ ಮನೆಯ ಕೌಂಪೌಂಡನ್ನು ಜೆಸಿಬಿ ಯಂತ್ರದ ಮೂಲಕ ಕೆಡವುತ್ತಿರುವುದನ್ನು ನೋಡಿ ಗಂಗಮ್ಮ ಅಕ್ಷೇಪಿಸಿದ್ದಾರೆ. ಈ ವೇಳೆ ಆರೋಪಿ ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿರುತ್ತಾನೆ. ಹಲ್ಲೆಯಿಂದ ಗಾಯಗೊಂಡ ಗಂಗಮ್ಮ ಅವರನ್ನು ಚಿಕಿತ್ಸೆಗಾಗಿ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಡಬ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 34/2024 ಕಲಂ 447, 427, 323, 504 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment