ಬಂಟ್ವಾಳ, ಮಾರ್ಚ್ 06, 2024 (ಕರಾವಳಿ ಟೈಮ್ಸ್) : ಇಲ್ಲಿಗೆ ಸಮೀಪದ ಚೆಂಡ್ತಿಮಾರ್ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಹಾಗೂ ಆದಿದ್ರಾವಿಡ ಸುಧಾರಕ ಸಂಘ ಇದರ 63ನೇ ವರ್ಷದ ಮಹಾಶಿವರಾತ್ರಿ ಭಜನೋತ್ಸವ ನೇಮೋತ್ಸವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಮಾರ್ಚ್ 7 ರಿಂದ 9ರವರೆಗೆ ನಡೆಯಲಿದೆ.
ಮಾರ್ಚ್ 7 ರಂದು ಸಾಂಸ್ಕøತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜೂನಿಯರ್ ಕುನಾಲ್ ಗಾಂಜವಾಲ ಖ್ಯಾತಿಯ ಪ್ರಶಾಂತ್ ಕಂಕನಾಡಿ ಹಾಗೂ ಪವಿತ್ರ ದೀಪಕ್ ಅವರ ಸ್ಟಾರ್ ವಾಯ್ಸ್ ಮೆಲೋಡೀಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಮಾರ್ಚ್ 8 ರಂದು ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಪ್ರಭಾಕರ್ ಪೈ ಜಕ್ರಿಬೆಟ್ಟು ಅವರು ಉದ್ಘಾಟಿಸುವರು. ಮಾರ್ಚ್ 9 ರಂದು ಶ್ರೀ ಸತ್ಯಪದ್ನಾಜಿ ಸಾರ ಮುಪ್ಪಣ್ಯರ ಹಾಗೂ ಅಲೆರ ಪಂಜುರ್ಲಿ ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.
ಮಾರ್ಚ್ 7 ರಂದು ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಚೆಂಡ್ತಿಮಾರು ಮಹಾಲಿಂಗೇಶ್ವರ ಭಜನಾ ಮಂಡಳಿ ಹಾಗೂ ಆದಿದ್ರಾವಿಡ ಸುಧಾಕರ ಸಂಘದ ಅಧ್ಯಕ್ಷ ಜನಾರ್ದನ ಚೆಂಡ್ತಿಮಾರ್ ಸಭಾಧ್ಯಕ್ಷತೆ ವಹಿಸುವರು. ಉದ್ಯಮಿ ಜಗನ್ನಾಥ ಚೌಟ ಬದಿಗುಡ್ಡೆ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶ್ರೀ ಕಾರಂಬಡೆ ಕ್ಷೇತ್ರದ ಧರ್ಮದರ್ಶಿ ಅರುಣ್ ಕುಮಾರ್, ನಾರಾಯಣ ಕುಂದರ್ ಪಣೆಕಲ, ಮಾಜಿ ಸೈನಿಕ ಗಣೇಶ್ ಕುಲಾಲ್ ಪಣೆಕಲ ಅವರು ಭಾಗವಹಿಸುವರು.
ಇದೇ ವೇಳೆ ರಾಷ್ಟ್ರೀಯ ತ್ರೋಬಾಲ್ ಕ್ರೀಡಾಪಟು ಕು ಸುಪ್ರಿಯಾ ಎಸ್ ಪಿ ಚೆಂಡ್ತಿಮಾರ್ ಅವರಿಗೆ ಸನ್ಮಾನ ಹಾಗೂ ಶಿಕ್ಷಣ ಕ್ಷೇತ್ರದ ಸಾಧಕ ಮಾಸ್ಟರ್ ಯಶವಂತ್ ಚೆಂಡ್ತಿಮಾರ್ ಅವರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
0 comments:
Post a Comment