ಬಂಟ್ವಾಳ, ಮಾರ್ಚ್ 21, 2024 (ಕರಾವಳಿ ಟೈಮ್ಸ್) : ಅಪರಿಚಿತ ವಾಟ್ಸಪ್ ಸಂದೇಶ ನಂಬಿ ಆಫ್ ಡೌನ್ ಲೋಡ್ ಮಾಡಿಕೊಂಡು ಹಣ ಹೂಡಿಕೆ ಮಾಡಿದ ಅಟೋ ರಿಕ್ಷಾ ಚಾಲಕ ಲಕ್ಷಾಂತರ ರೂಪಾಯಿ ಕಳೆದುಕೊಂಡ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಪಾಡಿ ಗ್ರಾಮದ ನಿವಾಸಿ ಹರೀಶ್ ಕುಮಾರ್ (33) ಎಂಬವರು ಅಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಅವರ ಮೊಬೈಲಿಗೆ 2023 ರ ಡಿಸೆಂಬರ್ 20 ರಂದು ಅಪರಿಚಿತ ವಾಟ್ಸಪ್ ನಿಂದ ಬಂದ ಸೂಚನೆಯಂತೆ, NumGenius A1 APPನ್ನು ಡೌನ್‍ಲೋಡು ಮಾಡಿಕೊಂಡಿರುತ್ತಾರೆ. ಸದ್ರಿ ಆಪ್ ಮೂಲಕ ಹಣವನ್ನು ಹೂಡಿಕೆ ಮಾಡಿ ಲಾಭಗಳಿಸುವ ಉದ್ದೇಶದಿಂದ ಅಪರಿಚಿತ ವಾಟ್ಸಪಿನಲ್ಲಿ ಸೂಚಿಸಿದ ವಿವಿಧ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 5,85,200/- ರೂಪಾಯಿ ಹಣವನ್ನು ವರ್ಗಾಯಿಸಿರುತ್ತಾರೆ. ಈ ಪೈಕಿ 1,20,175/- ಹಣವನ್ನು ಹಿಂತಿರುಗಿಸಿದ್ದು, ಬಾಕಿ 4,65,025/- ರೂಪಾಯಿ ಹಣವನ್ನು ವಾಪಾಸು ನೀಡದೆ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 37/2024, ಕಲಂ 417, 419, 420 ಐಪಿಸಿ ಹಾಗೂ 66(ಸಿ) 66(ಡಿ) ಮಾಹಿತಿ ತಂತ್ರಜ್ಞಾನ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment