ಬೆಳ್ತಂಗಡಿ, ಮಾರ್ಚ್ 13, 2024 (ಕರಾವಳಿ ಟೈಮ್ಸ್) : ಎಟಿಎಂ ಕಾರ್ಡ್ ಬಳಸಲು ತಿಳಿಯದೆ ಸಹಾಯ ಕೇಳಿದ ವ್ಯಕ್ತಿ ಎಟಿಎಂ ಬದಲಾಯಿಸಿ ನೀಡಿ ಪಿನ್ ಬಳಸಿ ಲಕ್ಷಾಂತರ ರೂಪಾಯಿ ಲಪಟಾಯಿಸಿದ ಘಟನೆ ಬೆಳ್ತಂಗಡಿ ಕಸಬಾ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಮೆಲಂತಬೆಟ್ಟು ನಿವಾಸಿ ಶರೀಫ್ (53) ಎಂಬವರು ಬುಧವಾರ ಸಂಜೆ ಬೆಳ್ತಂಗಡಿ ಕಸಬಾ ಗ್ರಾಮದ ಎಸ್.ಬಿ.ಐ ಎಟಿಎಂ ಯಂತ್ರದಿಂದ ಹಣ ಪಡೆಯಲು ಬಂದಿದ್ದು, ಈ ವೇಳೆ ತನಗೆ ಎಟಿಎಂ ಕಾರ್ಡ್ ಬಳಕೆಯ ಬಗ್ಗೆ ತಿಳಿಯದೇ ಇದ್ದುದರಿಂದ, ಅಲ್ಲೇ ಪಕ್ಕದಲ್ಲಿದ್ದ ಅಪರಿಚಿತ ವ್ಯಕ್ತಿಯ ಕೈಯಲ್ಲಿ ಎಟಿಎಂ ಕಾರ್ಡ್ ನೀಡಿ ಆತನಿಗೆ ಎ.ಟಿ.ಎಂ ಪಿನ್ ಸಂಖ್ಯೆಯೂ ತಿಳಿಸಿ ಹಣ ತೆಗೆದುಕೊಡುವಂತೆ ವಿನಂತಿಸಿಕೊಂಡಂತೆ ಅಪರಿಚಿತ ವ್ಯಕ್ತಿಯು ಶರೀಫ್ ಅವರಿಗೆ 3 ಸಾವಿರ ರೂಪಾಯಿ ಹಣವನ್ನು ಎ.ಟಿ.ಎಂ ಯಂತ್ರದಿಂದ ತೆಗೆದು ಕೊಟ್ಟಿದ್ದಾರೆ. ಮೂರು ದಿನಗಳ ನಂತರ ಶರೀಫ್ ಅವರ ಖಾತೆಯಿಂದ 1,05,300/- ರೂಪಾಯಿ ಹಣ ಕಡಿತವಾಗಿರುವ ವಿಚಾರ ತಿಳಿದು ಬಂದಿದೆ. ಈ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿದಾಗ, ಶರೀಪ್ ಅವರಿಗೆ ಅಪರಿಚಿತ ವ್ಯಕ್ತಿ ಎಟಿಎಂ ಕಾರ್ಡ್ ಬದಲಾಯಿಸಿ ನೀಡಿರುವುದು ಬೆಳಕಿಗೆ ಬಂದಿದೆ.
ಅಪರಿಚಿತ ವ್ಯಕ್ತಿಯು ಶರೀಫ್ ಅವರ ಎ.ಟಿ.ಎಂ ಕಾರ್ಡ್ ಬಳಸಿ 1,05,300/- ರೂಪಾಯಿ ಕಳ್ಳತನ ಮಾಡಿರುವುದಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 35/2024 ಕಲಂ 420, 379 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment