ಬೆಳ್ತಂಗಡಿ, ಮಾರ್ಚ್ 02, 2024 (ಕರಾವಳಿ ಟೈಮ್ಸ್) : ತಾಲೂಕಿನ ಕೊಕ್ಕಡ ಗ್ರಾಮದ ಕುಸುಮ ಚಿಕನ್ ಸೆಂಟರ್ ಬಳಿ ನಿಲ್ಲಿಸಿದ್ದ ಕಾರು ಕಳವಾಗಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಕೊಕ್ಕಡ ನಿವಾಸಿ ಕಿಶೋರ್ ಪೂಜಾರಿ (37) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಫೆ 25 ರಂದು ರಾತ್ರಿ ತನ್ನ ಗೆಳೆಯನ ಬಿಳಿ ಬಣ್ಣದ ಮಾರುತಿ 800 ಕಾರನ್ನು ಕೊಕ್ಕಡ ಕುಸುಮ ಚಿಕನ್ ಸೆಂಟರ್ ಬಳಿ ನಿಲ್ಲಿಸಿ ಬೆಂಗಳೂರಿಗೆ ತೆರಳಿದ್ದು, ಮಾರ್ಚ್ 1 ರಂದುದ ಬೆಳಿಗ್ಗೆ ಬಂದು ನೋಡಿದಾಗ ಕಾರು ಕಳವಾಗಿರುವುದು ಬೆಳಕಿಗೆ ಬಂದಿದೆ.
ಕಳವಾಗಿರುವ ಕಾರಿನ ಅಂದಾಜು ಮೌಲ್ಯ 40 ಸಾವಿರ ರೂಪಾಯಿಗಳಾಗಿದ್ದು, ಈ ಬಗ್ಗೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment