ಬಂಟ್ವಾಳ, ಮಾರ್ಚ್ 15, 2024 (ಕರಾವಳಿ ಟೈಮ್ಸ್) : ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ (ಬುಡಾ) ಇದರ ನೂತನ ಅಧ್ಯಕ್ಷರಾಗಿ ಸರಕಾರದಿಂದ ನೇಮಕಗೊಂಡಿರುವ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅವರ ತಂಡ ಮಾರ್ಚ್ 16 ರಂದು ಶನಿವಾರ (ನಾಳೆ) ಬೆಳಿಗ್ಗೆ 10.30 ಕ್ಕೆ ಬಿ ಸಿ ರೋಡಿನ ಬುಡಾ ಕಚೇರಿಯಲ್ಲಿ ಪದಗ್ರಹಣ ಮಾಡಲಿದ್ದಾರೆ.
ಬ್ಯಾಂಕ್ ಮ್ಯಾನೇಜರ್ ಹುದ್ದೆಯಿಂದ ಸ್ವಯಂ ನಿವೃತ್ತಿ ಹೊಂದಿ ರಾಜಕೀಯ ರಂಗಕ್ಕೆ ಬಂದಿದ್ದ ಬೇಬಿ ಕುಂದರ್ ಅವರು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಮಾಜಿ ಸಚಿವ ಬಿ ರಮಾನಾಥ ರೈ ಅವರ ವಿಶೇಷ ಶಿಫಾರಸ್ಸಿನ ಮೇರೆಗೆ ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರ (ಬುಡಾ)ದ ಅಧ್ಯಕ್ಷರಾಗಿ ಸರಕಾರ ನೇಮಕಗೊಳಿಸಿದೆ.
ಉಳಿದಂತೆ ಬುಡಾ ಸದಸ್ಯರುಗಳಾಗಿ ಬಿ ಕಸ್ಬಾ ನಿವಾಸಿ ಮನೋಹರ್ ನೇರಂಬೋಳ್, ಅಜ್ಜಿಬೆಟ್ಟು ನಿವಾಸಿ ಹರೀಶ್, ಗೂಡಿನಬಳಿ ನಿವಾಸಿ ಅಬ್ದುಲ್ ರಝಾಕ್ ಅವರನ್ನು ನೇಮಕಗೊಳಿಸಲಾಗಿದೆ.
0 comments:
Post a Comment