182 ಜೋಡಿ ಕೋಣಗಳ ಭಾಗವಹಿಸುವಿಕೆಯೊಂದಿಗೆ ಯಶಸ್ವಿ ಸಂಪನ್ನಗೊಂಡ ಕೂಡಿಬೈಲು 13ನೇ ವರ್ಷದ ಮೂಡೂರು-ಪಡೂರು “ಬಂಟ್ವಾಳ ಕಂಬಳೋತ್ಸವ” : ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಕೋಣಗಳಿಗೆ ಅವಳಿ ಪ್ರಶಸ್ತಿ
ಬಂಟ್ವಾಳ, ಮಾರ್ಚ್ 03, 2024 (ಕರಾವಳಿ ಟೈಮ್ಸ್) : ಕಂಬಳ ಜಾನಪದ ವೀರ ಕ್ರೀಡೆಯಾಗಿದ್ದು, ಇದಕ್ಕೆ ತುಳುನಾಡಿನ ಐತಿಹಾಸಿಕ ಪರಂಪರೆಯ ಹಿನ್ನಲೆ ಇದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಹೇಳಿದರು.
ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಕೂಡಿಬೈಲಿನಲ್ಲಿ ತನ್ನ ಗೌರವಾಧ್ಯಕ್ಷತೆಯಲ್ಲಿ, ಪಿಯೂಸ್ ಎಲ್ ರೋಡ್ರಿಗಸ್ ಅವರ ಅಧ್ಯಕ್ಷೆಯಲ್ಲಿ ನಡೆದ 13ನೇ ವರ್ಷದ ಮೂಡೂರು-ಪಡೂರು “ಬಂಟ್ವಾಳ ಕಂಬಳೋತ್ಸವ”ದ ಭಾನುವಾರ (ಮಾ 3) ನಡೆದ ವಿಜೇತ ಕೋಣಗಳ ಮಾಲಕರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಕಾವಳಕಟ್ಟೆಯಲ್ಲಿ ಆರಂಭವಾದ ಈ ಮೂಡೂರು-ಪಡೂರು ಜೋಡುಕರೆ ಬಯಲು ಕಂಬಳ ಜನರ ಬೆಂಬಲದಿಂದ ಮತ್ತೆ ನಾವೂರಿನಲ್ಲಿ ಮುಂದುವರಿಸಲಾಗಿದೆ. ಇಲ್ಲೂ ಕೂಡಾ ಮೂರು ವರ್ಷಗಳಿಂದ ಯಶಸ್ವಿಯಾಗಿ ಮುಂದುವರಿದಿದೆ. ದೇವರ ಅನುಗ್ರಹ ಹಾಗೂ ಆಶೀರ್ವಾದದ ಜೊತೆಗೆ ಎಲ್ಲರ ಬೆಂಬಲದಿಂದ ಕಂಬಳ ಕೂಟ ಯಶಸ್ವಿಯಾಗಿ ಮುಂದುವರಿದಿದ್ದು, ಇದಕ್ಕಾಗಿ ನಾನು ಎಲ್ಲರಿಗೂ ಸದಾ ಚಿರ ಋಣಿ ಎಂದರು.
ನಾವೂರು-ಕೂಡಿಬೈಲಿನಲ್ಲಿ ಆರಂಭದ ವರ್ಷ ಕೇವಲ 24 ದಿನಗಳಲ್ಲಿ ಕರೆ ನಿರ್ಮಾಣ ಮಾಡಿ ಇತಿಹಾಸ ಸೃಷ್ಟಿಸುವ ಮೂಲಕ ಕಂಬಳ ಆಯೋಜಿಸಲಾಗಿದ್ದು, ಮಳೆ ಬರುವ ಸಂದರ್ಭ ಇದ್ದಾಗ ಸರ್ವಧರ್ಮೀಯರ ಆರಾಧನಾ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ಮೂಲಕ ಕಂಬಳೋತ್ಸವದ ಯಶಸ್ವಿಗಾಗಿ ಸರ್ವಧರ್ಮೀಯರ ದೇವರ ಮೊರೆ ಹೋಗಲಾಗಿತ್ತು. ಈ ಸಂದರ್ಭ ಭಗವಂತ ವಿಶೇಷ ಅನುಗ್ರಹ ನೀಡುವ ಮೂಲಕ ಕಂಬಳ ಯಶಸ್ವಿಯಾಗಿದೆ ಎಂದು ರಮಾನಾಥ ರೈ ಸ್ಮರಿಸಿಕೊಂಡರು.
ಕಂಬಳ ಸಮಿತಿಯ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಮಾತನಾಡಿ, ಬಂಟ್ವಾಳ ಕಂಬಳೋತ್ಸವ ಯಶಸ್ವಿಗಾಗಿ ಆಹೋರಾತ್ರಿ ನಮ್ಮೊಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮನಸಾರೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ವಿಶೇಷ ಅಭಿನಂದನೆಗಳು, ಮುಂದಿನ ದಿನಗಳಲ್ಲೂ ಈ ಕಂಬಳೋತ್ಸವದ ಯಶಸ್ಸೀ ಮುಂದುವರಿಕೆ ತಮ್ಮೆಲ್ಲರ ಸಹಕಾರ ಅತೀ ಅಗತ್ಯ ಎಂದು ಕೋರಿದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಜೆ ಆರ್ ಲೋಬೋ, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಅಭಯಚಂದ್ರ ಜೈನ್, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಕೆಪಿಸಿಸಿ ಪ್ರಧಾನ ಕಾರ್ಯದಶಿ ಪದ್ಮರಾಜ್ ಆರ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಐಕಳಬಾವ, ರಾಜ್ಯ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಡಿ ಎಸ್ ಗಟ್ಟಿ, ಮಂಗಳೂರು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಚಲನ ಚಿತ್ರ ನಟ ಪ್ರಜ್ವಲ್ ದೇವರಾಜ್, ಪತ್ನಿ ರಾಗಿಣಿ, ಬಂಟರ ಮಾತೃಸಂಘದ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.
ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಸಂಚಾಲಕ ಬಿ ಪದ್ಮಶೇಖರ್ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಉಪಾಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್, ಬಿ ಎಂ ಅಬ್ಬಾಸ್ ಆಲಿ, ಪ್ರಮುಖರಾದ ಧನಭಾಗ್ಯ ಆರ್ ರೈ, ಚೈತ್ರದೀಪ್ ರೈ, ಚರಿಷ್ಮಾ ಆರ್ ರೈ, ಶಬೀರ್ ಸಿದ್ದಕಟ್ಟೆ, ರಾಜೇಶ್ ರೋಡ್ರಿಗಸ್, ಯೂಸುಪ್ ಕರಂದಾಡಿ, ಸಿದ್ದೀಕ್ ಗುಡ್ಡೆಅಂಗಡಿ, ಸದಾಶಿವ ಬಂಗೇರ, ಲೋಲಾಕ್ಷ ಶೆಟ್ಟಿ, ಪ್ರವೀಣ್ ರೋಡ್ರಿಗಸ್, ಶರೀಫ್ ಶಾಂತಿ ಅಂಗಡಿ, ಹಸೈನಾರ್ ತಾಳಿಪಡ್ಪು, ಜಿ ಎಂ ಇಬ್ರಾಹಿಂ ಮಂಚಿ, ಕರೀಂ ಬೊಳ್ಳಾಯಿ, ಇಕ್ಬಾಲ್ ಜೆಟಿಟಿ, ಮುಹಮ್ಮದ್ ನಂದಾವರ, ಸುರೇಶ್ ಪೂಜಾರಿ ಜೋರಾ, ಸುರೇಶ್ ಕುಮಾರ್ ನಾವೂರ, ಸಿದ್ದೀಕ್ ಸರವು, ಜಗದೀಶ್ ಕುಂದರ್, ಡೆಂಝಿಲ್ ನೊರೊನ್ಹಾ, ಜನಾರ್ದನ ಚೆಂಡ್ತಿಮಾರ್, ವೆಂಕಪ್ಪ ಪೂಜಾರಿ, ಶೋಭಾ ಶೆಟ್ಟಿ, ಫೌಝಿಯಾ ಮೊದಲಾದವರು ಉಪಸ್ಥಿತರಿದ್ದರು. ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ತೀರ್ಪುಗಾರ ಮಂಡಳಿಯ ಪ್ರಧಾನ ತೀರ್ಪುಗಾರ ರಾಜೀವ್ ಶೆಟ್ಟಿ ಎಡ್ತೂರು ಬಹುಮಾನ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು.
“ಮೂಡೂರು - ಪಡೂರು” ಬಂಟ್ವಾಳ ಕಂಬಳೋತ್ಸವದ ಫಲಿತಾಂಶ
ಕೂಟದಲ್ಲಿ ಭಾಗವಹಿಸಿದ ಕೋಣಗಳ ಒಟ್ಟು ಸಂಖ್ಯೆ : 182
ಕನೆಹಲಗೆ : 9 ಜೊತೆ ಅಡ್ಡಹಲಗೆ : 4 ಜೊತೆ ಹಗ್ಗ ಹಿರಿಯ : 15 ಜೊತೆ ನೇಗಿಲು ಹಿರಿಯ : 29 ಜೊತೆ ಹಗ್ಗ ಕಿರಿಯ : 20 ಜೊತೆ ನೇಗಿಲು ಕಿರಿಯ : 105 ಜೊತೆ
ಕನೆಹಲಗೆ (ನೀರು ನೋಡಿ ಬಹುಮಾನ)
ಪ್ರಥಮ : ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮುಟ್ಟಿದವರು : ತೆಕ್ಕಟ್ಟೆ ಸುಧೀರ್ ದೇವಾಡಿಗ
ದ್ವಿತೀಯ : ಅಲ್ಲಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೊ
ಹಲಗೆ ಮುಟ್ಟಿದವರು : ಬೈಂದೂರು ಮಹೇಶ್ ಪೂಜಾರಿ
ಅಡ್ಡ ಹಲಗೆ
ಪ್ರಥಮ : ಅಲ್ಲಿಪಾದೆ ಪೆರಿಯಾರ್ ಮಿಂಗಲ್ ಸೇನ್
ಹಲಗೆ ಮುಟ್ಟಿದವರು : ಭಟ್ಕಳ ಹರೀಶ್
ದ್ವಿತೀಯ : ಅಲ್ಲಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೋ
ಹಲಗೆ ಮುಟ್ಟಿದವರು : ಸಾವ್ಯ ಗಂಗಯ್ಯ ಪೂಜಾರಿ
ಹಗ್ಗ ಹಿರಿಯ
ಪ್ರಥಮ : ನಂದಳಿಕೆ ಶ್ರೀಕಾಂತ್ ಭಟ್ “ಎ’’
ಓಡಿಸಿದವರು : ಬಂಬ್ರಾಣ ಬೈಲು ವಂದಿತ್ ಶೆಟ್ಟಿ
ದ್ವಿತೀಯ : ನಂದಳಿಕೆ ಶ್ರೀಕಾಂತ್ ಭಟ್ “ಬಿ”
ಓಡಿಸಿದವರು : ಕಾವೂರ್ ತೋಟ ಸುದರ್ಶನ್
ಹಗ್ಗ ಕಿರಿಯ
ಪ್ರಥಮ : ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ದಿನಕರ್ ಬಿ ಶೆಟ್ಟಿ
ಓಡಿಸಿದವರು : ಭಟ್ಕಳ ಶಂಕರ್
ದ್ವಿತೀಯ : ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ
ಓಡಿಸಿದವರು : ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್
ನೇಗಿಲು ಹಿರಿಯ
ಪ್ರಥಮ : ನೂಜಿಪ್ಪಡಿ ಡಾ. ಪ್ರವೀಣ್ ಹೊಳ್ಳ “ಬಿ”
ಓಡಿಸಿದವರು: ನಕ್ರೆ ಪವನ್ ಮಡಿವಾಳ
ದ್ವಿತೀಯ : ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ
ಓಡಿಸಿದವರು : ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ
ನೇಗಿಲು ಕಿರಿಯ
ಪ್ರಥಮ : ಮಿಜಾರ್ ಹರಿಮೀನಾಕ್ಷಿ ತೋಟ ಹರಿಯಪ್ಪ ಶೆಟ್ಟಿ “ಬಿ”
ಓಡಿಸಿದವರು : ಪಣಪಿಲ ಪ್ರವೀಣ್ ಕೋಟ್ಯಾನ್
ದ್ವಿತೀಯ : ನಿಟ್ಟೆ ಹೊಸವಕ್ಲು ಸುರೇಶ ಕೋಟ್ಯಾನ್ “ಬಿ”
ಓಡಿಸಿದವರು : ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್
0 comments:
Post a Comment