ಸಜಿಪಮೂಡ : ಅಟೋ ರಿಕ್ಷಾ ಡಿಕ್ಕಿ ಹೊಡೆದು ಪಾದಚಾರಿ ಮಹಿಳೆ ಆಸ್ಪತ್ರೆಗೆ - Karavali Times ಸಜಿಪಮೂಡ : ಅಟೋ ರಿಕ್ಷಾ ಡಿಕ್ಕಿ ಹೊಡೆದು ಪಾದಚಾರಿ ಮಹಿಳೆ ಆಸ್ಪತ್ರೆಗೆ - Karavali Times

728x90

18 March 2024

ಸಜಿಪಮೂಡ : ಅಟೋ ರಿಕ್ಷಾ ಡಿಕ್ಕಿ ಹೊಡೆದು ಪಾದಚಾರಿ ಮಹಿಳೆ ಆಸ್ಪತ್ರೆಗೆ

ಬಂಟ್ವಾಳ, ಮಾರ್ಚ್ 18, 2024 (ಕರಾವಳಿ ಟೈಮ್ಸ್) : ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ಅಟೋ ರಿಕ್ಷಾ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಸಜಿಪಮೂಡ ಗ್ರಾಮದ ಗುರು ಮಂದಿರ ಬಳಿ ಸೋಮವಾರ ಸಂಭವಿಸಿದೆ. 

ಗಾಯಗೊಂಡ ಮಹಿಳೆಯನ್ನು ಇಲ್ಲಿನ ನಿವಾಸಿ ಗಿರಿಜಾ ಎಂದು ಹೆಸರಿಸಲಾಗಿದೆ. ಇವರು ಗುರು ಮಂದಿರ ಬಳಿ ರಸ್ತೆ ದಾಟಲು ನಿಂತಿದ್ದ ವೇಳೆ ಸಜಿಪನಡು ಕಡೆಯಿಂದ ಮೆಲ್ಕಾರ್ ಕಡೆಗೆ ಸಂಚರಿಸುತ್ತಿದ್ದ ಮೊಹಮ್ಮದ್ ನೌಸಿರ್ ಎಂಬವರು ಚಲಾಯಿಸುತ್ತಿದ್ದ ಅಟೋ ರಿಕ್ಷಾ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಅಪಘಾತದಿಂದ ರಸ್ತೆಗೆ ಬಿದ್ದ ಗಿರಿಜಾ ಅವರು ಗಾಯಗೊಂಡಿದ್ದು, ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಗಾಯಾಳು ಗಿರಿಜಾ ಅವರ ಸಹೋದರ ರಾಮ ಪೂಜಾರಿ ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸಜಿಪಮೂಡ : ಅಟೋ ರಿಕ್ಷಾ ಡಿಕ್ಕಿ ಹೊಡೆದು ಪಾದಚಾರಿ ಮಹಿಳೆ ಆಸ್ಪತ್ರೆಗೆ Rating: 5 Reviewed By: karavali Times
Scroll to Top