ಬಂಟ್ವಾಳ, ಮಾರ್ಚ್ 20, 2024 (ಕರಾವಳಿ ಟೈಮ್ಸ್) : ಮನೆಯಲ್ಲಿ ಕುಸಿದು ಬಿದ್ದು ಗಂಭೀರಾವಸ್ಥೆಗೆ ತಲುಪಿದ್ದ ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲಾ 2ನೇ ತರಗತಿ ವಿದ್ಯಾರ್ಥಿನಿ, ಬಿ ಸಿ ರೋಡು ಸಮೀಪದ ತಲಪಾಡಿ ನಿವಾಸಿ ಸಫೀರ್ ಅಹ್ಮದ್ ಅವರ ಪುತ್ರಿ ಆಯಿಷಾ ಶೈಮಾ (7 ವರ್ಷ) ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾಳೆ.
ವಿದ್ಯಾರ್ಥಿನಿ ಆಯಿಷಾ ಶೈಮಾ ಮೂರು ವಾರಗಳ ಹಿಂದೆ ಮನೆಯಲ್ಲಿ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಇವಳನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದೆರಡು ದಿನಗಳ ಕಾಲ ಕೋಮಾವಸ್ಥೆಯಲ್ಲೇ ಇದ್ದ ಈಕೆ ಬಳಿಕ ಒಂದಷ್ಟು ಚಿಕಿತ್ಸೆಗೆ ಸ್ಪಂದಿಸಿ ಚೇತರಿಕೆ ಹಂತದಲ್ಲಿದ್ದಳು ಎನ್ನಲಾಗಿದೆ. ಆದರೆ ಬುಧವಾರ ಮತ್ತೆ ಆರೋಗ್ಯದಲ್ಲಿ ಗಂಭೀರ ಏರು-ಪೇರು ಉಂಟಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.
0 comments:
Post a Comment