ಬೆಳ್ತಂಗಡಿ, ಮಾರ್ಚ್ 19, 2024 (ಕರಾವಳಿ ಟೈಮ್ಸ್) : ಪೋಲ್ಯಾಂಡ್ ದೇಶದಲ್ಲಿ ಕೆಲಸಕ್ಕೆ ಹೋಗಲು ವೀಸಾ ನೀಡುವುದಾಗಿ ವ್ಯಕ್ತಿಗೆ ಭರವಸೆ ನೀಡಿ ಲಕ್ಷಾಂತರ ರೂಪಾಯಿ ಹಣ ಪಡೆದು ವೀಸಾ ನೀಡದೆ, ಹಣವನ್ನು ವಾಪಾಸು ನೀಡದೆ ವಂಚಿಸಿದ ಆರೋಪಿಯ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕು, ಅರಸಿನಮಕ್ಕಿ ನಿವಾಸಿ ರೆಜಿ ಕೆ ಎ ಎಂಬವರ ಪುತ್ರ ಆಲ್ವಿನ್ ಕೆ ಎ ಎಂಬವರೇ ಲಕ್ಷಾಂತರ ರೂಪಾಯಿ ಕಳೆದುಕೊಂಡು ವಂಚನೆಗೊಳಗಾದ ವ್ಯಕ್ತಿ. ಆರೋಪಿಯನ್ನು ಮನೋಜ್ ಎಂದು ಹೆಸರಿಸಲಾಗಿದೆ.
ಆಲ್ವಿನ್ ಕೆ ಎ ಅವರಿಗೆ ಮನೋಜ್ ಅವರು ಪೋಲ್ಯಾಂಡ್ ದೇಶದಲ್ಲಿ ಕೆಲಸಕ್ಕೆ ತೆರಳಲು ವೀಸಾ ನೀಡುವುದಾಗಿ ನಂಬಿಸಿ 2023 ರ ಮೇ 22 ರಿಂದ ಮಂಗಳವಾರದವರೆಗೆ (ಮಾ 19) ನಡುವಿನ ಅವಧಿಯಲ್ಲಿ ವಿವಿಧ ಕಾರಣ ನೀಡಿ ಹಂತ ಹಂತವಾಗಿ ಒಟ್ಟು 2.5 ಲಕ್ಷ ರೂಪಾಯಿ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾನೆ. ಇದುವರೆಗೂ ವೀಸಾವನ್ನೂ ನೀಡದೆ, ನೀಡಿದ ಹಣವನ್ನೂ ವಾಪಾಸು ನೀಡದೆ ವಂಚಿಸಿರುವುದಾಗಿ ಆಲ್ವಿನ್ ಅವರು ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 18/2024 ಕಲಂ 417, 420 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment