ಬಂಟ್ವಾಳ, ಫೆಬ್ರವರಿ 06, 2024 (ಕರಾವಳಿ ಟೈಮ್ಸ್) : ಪುದು ಗ್ರಾಮದ ಅಮ್ಮೆಮಾರ್ ಕ್ರಾಸ್ ಎಂಬಲ್ಲಿ ಅಕ್ರಮ ಮರಳು ಸಾಗಾಟ ಪ್ರಕರಣ ಪತ್ತೆ ಹಚ್ಚಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಲಾರಿ ಚಾಲಕ ಹಾಗೂ ಮಾಲಕರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಾನುವಾರ ತಡರಾತ್ರಿ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ಬಿ ಅವರ ನೇತೃತ್ವದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಪುದು ಗ್ರಾಮದ ಅಮ್ಮೆಮ್ಮಾರ್ ಕ್ರಾಸ್ ಎಂಬಲ್ಲಿ ತಪಾಸಣೆಗಾಗಿ ನೋಂದಣಿ ಸಂಖ್ಯೆ ಕೆಎ 21 ಸಿ 3517 ರ ಲಾರಿಯನ್ನು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ವಳಚ್ಚಿಲ್ ಹೊಳೆ ಬದಿಯಲ್ಲಿ ಮರಳು ಧಕ್ಕೆಯಲ್ಲಿ ಮರಳು ತುಂಬಿಸಿಕೊಂಡು ಅಕ್ರಮ ಸಾಗಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಲಾರಿ ಹಾಗೂ ಮರಳನ್ನು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿ ಲಾರಿ ಚಾಲಕ ಮಹಮ್ಮದ್ ನವಾಜ್ ಹಾಗೂ ಮಾಲಿಕ ಅಬೂಬಕ್ಕರ್ ಸಿದ್ದಿಕ್ ಬೊಳಂತೂರು ಎಂಬವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment