ವೇಣೂರು, ಫೆಬ್ರವರಿ 27, 2024 (ಕರಾವಳಿ ಟೈಮ್ಸ್) : ಅಕ್ರಮ ಮರಳು ಸಾಗಾಟ ಪ್ರಕರಣ ಪತ್ತೆ ಹಚ್ಚಿದ ವೇಣೂರು ಪೊಲೀಸರು ಟಿಪ್ಪರ್ ಲಾರಿ ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಮಂಗಳವಾರ ಮಧ್ಯಾಹ್ನ ಹೊಸಂಗಡಿ ಎಂಬಲ್ಲಿ ಕೆಎ07 ಬಿ5412 ನೋಂದಣಿಯ ಟಿಪ್ಪರ್ ಲಾರಿಯನ್ನು ವೇಣೂರು ಠಾಣಾ ಪಿಎಸ್ಸೈ ಶ್ರೀಶೈಲ್ ಡಿ ಮುರಗೋಡ್ ಅವರ ನೇತೃತ್ವದ ಪೊಲೀಸರು ತಡೆದು ತಪಾಸಣೆ ನಡೆಸಿದಾಗ ಆರೋಪಿತ ಕಾಶಿಪಟ್ಣ ಗ್ರಾಮದ ನಿವಾಸಿ ವಸಂತ (27) ಎಂಬಾತ ಯಾವುದೇ ಪರವಾನಗಿ ಇಲ್ಲದೇ, ಎಲ್ಲಿಂದಲೋ ನದಿಯಿಂದ ಮರಳನ್ನು ಕಳವು ಮಾಡಿ, ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ.
ಈ ಬಗ್ಗೆ ಮುಂದಿನ ಕಾನೂನು ಕ್ರಮಕ್ಕಾಗಿ ಮರಳು ಸಹಿತ ಟಿಪ್ಪರ್ ಲಾರಿಯನ್ನು ಸ್ವಾಧೀನಪಡಿಸಿಕೊಂಡು, ಅರೋಪಿಯ ವಿರುದ್ದ ವೇಣೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
0 comments:
Post a Comment