ಮಂಗಳೂರು, ಫೆಬ್ರವರಿ 09, 2024 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವಿವಿಧ ಪೊಲೀಸ್ ಠಾಣೆಗಳ, ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಒಟ್ಟು 11 ಕೆಜಿ 365 ಗ್ರಾಂ ಗಾಂಜಾ ಹಾಗೂ 42.57 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತುವನ್ನು ಸೂಕ್ತ ಪ್ರಕ್ರಿಯೆಯಲ್ಲಿ, ಜಿಲ್ಲಾ ಮಾದಕ ವಸ್ತು ವಿಲೇವಾರಿ ಕಮಿಟಿ ಮೂಲಕ ಶುಕ್ರವಾರ (ಫೆ 9) ವಿಲೇವಾರಿ ಮಾಡಲಾಯಿತು.
ಸುಳ್ಯ ಠಾಣೆ ಅಪರಾಧ ಕ್ರಮಾಂಕ 196/2016 ರಲ್ಲಿ 1.070 ಕೆ.ಜಿ ಗಾಂಜಾ, ಬಂಟ್ವಾಳ ಗ್ರಾಮಾಂತರ ಠಾಣೆ ಅಪರಾಧ ಕ್ರಮಾಂಕ 28/2023 ರಲ್ಲಿ 894 ಗ್ರಾಂ ಗಾಂಜಾ, ಬಂಟ್ವಾಳ ಗ್ರಾಮಾಂತರ ಠಾಣೆ ಅಪರಾಧ ಕ್ರಮಾಂಕ 46/2023 ರಲ್ಲಿ 1.450 ಕೆ.ಜಿ ಗಾಂಜಾ, ವಿಟ್ಲ ಠಾಣಾ ಅಪರಾಧ ಕ್ರಮಾಂಕ 162/2023 ರಲ್ಲಿ 5.003 ಕೆ.ಜಿ ಗಾಂಜಾ, ಧರ್ಮಸ್ಥಳ ಠಾಣಾ ಅಪರಾಧ ಕ್ರಮಾಂಕ 86/2020 ರಲ್ಲಿ 538 ಗ್ರಾಂ ಗಾಂಜಾ ಹಾಗೂ ಅಪರಾಧ ಕ್ರಮಾಂಕ 89/2020 ರಲ್ಲಿ 310 ಗ್ರಾಂ ಗಾಂಜಾ, ಉಪ್ಪಿನಂಗಡಿ ಠಾಣಾ ಅಪರಾಧ ಕ್ರಮಾಂಕ 105/2023 ರಲ್ಲಿ 2.100 ಕೆ.ಜಿ ಗಾಂಜಾ ಹಾಗೂ ಸುಳ್ಯ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 27/2023 ರಲ್ಲಿ 42.57 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತುಗಳನ್ನು ಶುಕ್ರವಾರ ವಿಲೇವಾರಿ ಮಾಡಲಾಯಿತು.
0 comments:
Post a Comment