ಬಂಟ್ವಾಳ, ಫೆಬ್ರವರಿ 02, 2024 (ಕರಾವಳಿ ಟೈಮ್ಸ್) : ಖಾಸಗಿ ಬಸ್ಸು ಚಾಲಕನ ನಿರ್ಲಕ್ಷ್ಯದಿಂದ ಮಹಿಳೆಯೋರ್ವರು ಬಸ್ಸಿನಿಂದ ಹೊರಗೆಸೆಯಲ್ಪಟ್ಟು ಗಾಯಗೊಂಡ ಘಟನೆ ಮಾಣಿ ಎಂಬಲ್ಲಿ ಬುಧವಾರ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ಸಿನಿಂದ ಹೊರಗೆಸೆಯಲ್ಪಟ್ಟು ಗಾಯಗೊಂಡ ಮಹಿಳೆಯನ್ನು ಉಪ್ಪಿನಂಗಡಿ ನಿವಾಸಿ ರಾಧಾ ಎಂದು ಹೆಸರಿಸಲಾಗಿದೆ. ಬಸ್ಸು ಚಾಲಕ ಅಬ್ದುಲ್ ಸಮದ್ ಎಂಬಾತನ ನಿರ್ಲಕ್ಷ್ಯದ ಚಾಲನೆ ಹಾಗೂ ನಿರ್ವಾಹಕ ರಾಧಾಕೃಷ್ಣ ಬಳ್ಳಾಲ್ ಅವರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗಿದ್ದು, ನಿರ್ಲಕ್ಷ್ಯದ ಚಾಲನೆಯಿಂದ ರಾಧಾ ಅವರು ಬಸ್ಸಿನಿಂದ ಮುಂಭಾಗದ ಬಾಗಿಲ ಮೂಲಕ ರಸ್ತೆಗೆಸೆಯಲ್ಪಟಿದ್ದಾರೆ. ಘಟನೆಯಿಂದ ಗಾಯಗೊಂಡ ಅವರನ್ನು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಗಾಯಾಳು ಮಹಿಳೆಯ ಪುತ್ರಿ ಎಂ ಸುನಿತಾ ಅವರು ನೀಡಿದ ದೂರಿನಂತೆ ಬಸ್ಸು ಚಾಲಕ ಅಬ್ದುಲ್ ಸಮದ್ ಹಾಗೂ ನಿರ್ವಾಹಕ ರಾಧಾಕೃಷ್ಣ ಬಳ್ಳಾಲ್ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment