ಬಂಟ್ವಾಳ, ಫೆಬ್ರವರಿ 13, 2024 (ಕರಾವಳಿ ಟೈಮ್ಸ್) : ಅಕ್ರಮ ಮರಳು ಸಾಗಾಟ ಪ್ರಕರಣ ಪತ್ತೆ ಹಚ್ಚಿದ ಬಂಟ್ವಾಳ ನಗರ ಠಾಣಾ ಪೊಲೀಸರು ಮರಳು ಸಹಿತ ಲಾರಿಗಳನ್ನು ವಶಪಡಿಸಿಕೊಂಡ ಘಟನೆ ಸೋಮವಾರ ರಾತ್ರಿ ಬಿ ಮೂಡ ಗ್ರಾಮದ ತಲಪಾಡಿ ಎಂಬಲ್ಲಿ ನಡೆದಿದೆ.
ಬಂಟ್ವಾಳ ನಗರ ಠಾಣಾ ಪಿಎಸ್ಸೈ ರಾಮಕೃಷ್ಣ ನೇತೃತ್ವದ ಪೊಲೀಸರು ಸೋಮವಾರ ರಾತ್ರಿ ತಲಪಾಡಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮೂರು ಟಿಪ್ಪರ್ ಲಾರಿಗಳನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಈ ಅಕ್ರಮ ಮರಳು ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ.
ಅರೋಪಿಗಳು ವಳಚ್ಚಿಲ್ ಎಂಬಲ್ಲಿಂದ ಮರಳು ತುಂಬಿಸಿ ಸಾಗಾಟ ಮಾಡುತ್ತಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾರೆ. ಅಕ್ರಮ ಮರಳು ಸಾಗಾಟದ ಲಾರಿ ಚಾಲಕ-ಮಾಲಕರು ಹಾಗೂ ಮರಳು ಸಬರಾಜು ಮಾಡಿದ ಆರೋಪಿಗಳಾದ ಸಜಿಪಮುನ್ನೂರು ಗ್ರಾಮದ ನಿವಾಸಿ ಸರ್ಫರಾಜ್ ಅಹ್ಮದ್ (24), ಕುಳಾಲು ನಿವಾಸಿ ಅಬ್ದುಲ್ ಅಝೀಝ್, ಕುರಿಯಾಳ ಗ್ರಾಮದ ನಿವಾಸಿ ಕಿರಣ್ (23), ಅಮ್ಟಾಡಿ ಗ್ರಾಮದ ನಿವಾಸಿ ಅನಿಲ್ ಕ್ರಾಸ್ತಾ, ಮಂಚಿ ಗ್ರಾಮದ ನಿವಾಸಿ ಮೊಹಮ್ಮದ್ ಇಸ್ಮಾಯಿಲ್ ರಶೀದ್ (23), ಬಿ ಮೂಡ ಗ್ರಾಮದ ನಿವಾಸಿ ಮೊಹಮ್ಮದ್ ಆರಿಫ್, ವಳಚ್ಚಿಲ್ ನಿವಾಸಿ ಸತ್ತಾರ್ ಹಾಗೂ ಅಝರುದ್ದೀನ್ ಎಂಬವರ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment