ಬಂಟ್ವಾಳ, ಫೆಬ್ರವರಿ 20, 2024 (ಕರಾವಳಿ ಟೈಮ್ಸ್) : ರಾಯಿ ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ದತ್ತು ಸ್ವೀಕರಿಸಿದ ರಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳು ಮತ್ತು ಶಿಕ್ಷಣಾಸಕ್ತರ ನೆರವಿನಿಂದ ಖಾಸಗಿ ಶಾಲೆಯಂತೆ ವಿವಿಧ ಮೂಲಭೂತ ಸೌಕರ್ಯ ಒದಗಿಸುವುದರ ಜೊತೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಸಹಿತ ಗುಣ ಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಅಧ್ಯಕ್ಷ ಎಂ ದುರ್ಗಾದಾಸ್ ಶೆಟ್ಟಿ ಮಾವಂತೂರು ಹೇಳಿದರು.
ರಾಯಿ ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ಗೆ ಮುಂಬೈ ಅದೋರ್ ಕಂಪೆನಿ ಕೊಡುಗೆ ನೀಡಿದ ಶಾಲಾ ವಾಹನವನ್ನು ರಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಹಸ್ತಾಂತರಿಸಿ ಅವರು ಮಾತನಾಡಿದರು.
ಟ್ರಸ್ಟ್ ಅಧ್ಯಕ್ಷ ಮಧುಕರ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ರಾಜೇಶ ಶೆಟ್ಟಿ ಸೀತಾಳ, ಕಂಬಳ ಪೆÇ್ರೀತ್ಸಾಹಕಿ ರೂಪಾ ರಾಜೇಶ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಶಿವಾನಂದ, ಸೇವಾ ಪ್ರತಿನಿಧಿ ಶ್ಯಾಮಲ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ ಗೌಡ ಮೀಯಾಲು ಶುಭ ಹಾರೈಸಿದರು.
ಪ್ರಮುಖರಾದ ಕೆ ಪರಮೇಶ್ವರ ಪೂಜಾರಿ, ವಸಂತ ಗೌಡ ಮುದ್ದಾಜೆ, ಕೃಷ್ಣಪ್ಪ ಪೂಜಾರಿ ಕಾರಂಬಡೆ, ಮೋಹನ್ ಕೆ ಶ್ರೀಯಾನ್, ಬಿ ದಯಾನಂದ ಸಪಲ್ಯ, ವಿಶ್ವನಾಥ ಮಲ್ಲಿ ಹೋರಂಗಳ, ವಸಂತ ಪೂಜಾರಿ ಕೈರೋಳಿ, ಸತೀಶ ಬೊಲ್ಪೊಟ್ಟು, ಚಂದಪ್ಪ ಮಾಬೆಟ್ಟು, ರಾಮಣ್ಣ ಗೌಡ ಮೀಯಾಲು, ಸತೀಶ ಪೂಜಾರಿ, ಸಾಗರ್, ಧೀರಜ್, ಸುನಿಲ್, ಶಿಕ್ಷಕಿ ಬೇಬಿ, ತನುಜಾ, ರಂಜಿನಿ ಸತೀಶ್, ಉಷಾ ಪಿ ಪೂಜಾರಿ ಮೊದಲಾದವರು ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಜಾನೆಟ್ ಕಾನ್ಸೆಸೊ ಸ್ವಾಗತಿಸಿ, ಟ್ರಸ್ಟ್ ಸಂಚಾಲಕ ಹರೀಶ ಆಚಾರ್ಯ ರಾಯಿ ಪ್ರಸ್ತಾವನೆಗೈದರು. ಟ್ರಸ್ಟಿ ಪ್ರವೀಣ ಅಂಚನ್ ಕೊಯಿಲ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment