ಬಂಟ್ವಾಳ, ಫೆಬ್ರವರಿ 20, 2024 (ಕರಾವಳಿ ಟೈಮ್ಸ್) : ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿದ ನಾಲ್ವರ ತಂಡ ಜಮೀನಿನಲ್ಲಿದ್ದ ಅಡಿಕೆ ಗಿಡಗಳನ್ನು ಕಿತ್ತೆಸೆದ್ದಿದ್ದಲ್ಲದೆ ವ್ಯಕ್ತಿಗೆ ಜೀವಬೆದರಿಕೆ ಒಡ್ಡಿದ ಘಟನೆ ಸರಪಾಡಿ ಗ್ರಾಮದಲ್ಲಿ ಫೆ 15 ರಂದು ನಡೆದಿದೆ.
ಈ ಬಗ್ಗೆ ಮಣಿನಾಲ್ಕೂರು ಗ್ರಾಮದ ನಿವಾಸಿ ಮಂಜುನಾಥ ಟಿ ಸಿ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಫೆ 15 ರಂದು ಸಂಜೆ ಸರಪಾಡಿ ಗ್ರಾಮದಲ್ಲಿರುವ ತಮ್ಮ ಜಮೀನಿನಲ್ಲಿ ಕೆಲಸಗಾರರೊಂದಿಗೆ ಕೃಷಿ ಕೆಲಸದಲ್ಲಿ ನಿರತವಾಗಿದ್ದ ವೇಳೆ ಆರೋಪಿಗಳಾದ ಗಿರೀಶ, ರೇಖಾ ಗಿರೀಶ್, ಲೀಲಾವತಿ ಹಾಗೂ ರಕ್ಷಣ್ ಪೂಜಾರಿ ಎಂಬವರುಗಳು ಏಕಾಏಕಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಜಾಗದ ಸುತ್ತಲು ಅಳವಡಿಸಿದ 3 ರಿಂದ 4 ಕಂಬಗಳನ್ನು ಕಿತ್ತೆಸೆದಿರುತ್ತಾರೆ. ಬಳಿಕ ಸದ್ರಿ ಜಾಗದಲ್ಲಿ ನೆಟ್ಟಿದ ಅಡಿಕೆ ಸಸಿಗಳನ್ನು ಗುಂಡಿಯಿಂದ ಕಿತ್ತೆಸೆದಿದ್ದಾರೆ. ಈ ವೇಳೆ ಮಂಜುನಾಥ ಅವರು ಆರೋಪಿತರನ್ನು ಪ್ರಶ್ನಿಸಿದಾಗ ಆರೋಪಿತ ಗಿರೀಶ ಎಂಬಾತ ತಾನು ತಂದಿದ್ದ ಕತ್ತಿಯನ್ನು ತೋರಿಸಿ, ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ಉಳಿದ ಆರೋಪಿಗಳೂ ಕೂಡಾ ಬೆದರಿಕೆ ಒಡ್ಡಿರುತ್ತಾರೆ ಎಂದು ದೂರಲಾಗಿದೆ.
ಈ ಬಗ್ಗೆ ಮಂಜುನಾಥ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment