ಬಂಟ್ವಾಳ, ಫೆಬ್ರವರಿ 26, 2024 (ಕರಾವಳಿ ಟೈಮ್ಸ್) : ಸಜಿಪನಡು ನೇತ್ರಾವತಿ ನದಿಯ ಧಕ್ಕೆಯಿಂದ ಮರಳನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೆÇಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ಬಿ ಅವರ ನೇತೃತ್ವದ ಪೆÇಲೀಸರು ಸಜಿಪನಡು ಜಂಕ್ಷನ್ನಿನ ರಿಕ್ಷಾ ಪಾರ್ಕ್ ಬಳಿ ಸೋಮವಾರ ಮುಂಜಾನೆ ವಶಕ್ಕೆ ಪಡೆದುಕೊಂಡು ಇಬ್ಬರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೋಮವಾರ ಬೆಳಿಗ್ಗಿನ ಜಾವ ಸಜಿಪನಡು ಗ್ರಾಮದ ಸಜಿಪನಡು ಜಂಕ್ಷನ್ ರಿಕ್ಷಾ ಪಾರ್ಕ್ ಬಳಿ ಪೆÇಲೀಸರು ಕೆಎ 19 ಎಎ 1397 ನೋಂದಣಿ ಸಂಖ್ಯೆಯ ಟಿಪ್ಪರ್ ಲಾರಿಯನ್ನು ತಡೆದಾಗ ಅಕ್ರಮ ಮರಳು ಸಾಗಾಟ ಬೆಳಕಿಗೆ ಬಂದಿದೆ.
ಟಿಪ್ಪರ್ ಚಾಲಕ ಸಜಿಪನಡು ನಿವಾಸಿ ಅಬ್ದುಲ್ ರಹಿಮಾನ್ (35) ಎಂಬಾತನನ್ನು ವಿಚಾರಿಸಿದಾಗ ಸಜಿಪನಡು ನೇತ್ರಾವತಿ ನದಿಯ ದಡದಲ್ಲಿ ಧಕ್ಕೆಯಿಂದ ಮಹಮ್ಮದ್ ಎಂಬಾತನ ಸಹಕಾರದಿಂದ ಮರಳು ತುಂಬಿಸಿಕೊಂಡು ಸಾಗಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮುಂದಿನ ಕಾನೂನು ಕ್ರಮಕ್ಕಾಗಿ ಲಾರಿಯನ್ನು ಸ್ವಾಧೀನಪಡಿಸಿಕೊಂಡ ಪೆÇಲೀಸರು ಆರೋಪಿ ಲಾರಿ ಚಾಲಕ ಅಬ್ದುಲ್ ರಹಿಮಾನ್ ಹಾಗೂ ಕೃತ್ಯಕ್ಕೆ ಸಹಕರಿಸಿದ ಮಹಮ್ಮದ್ ಅವರುಗಳ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment