ಆಧಾರ್ ಕಾರ್ಡ್-ರೇಶನ್ ಕಾರ್ಡ್ ಲಿಂಕ್ ಮಾಡುವ ಅವಧಿ ಫೆಬ್ರವರಿ 29ರವರೆಗೆ ವಿಸ್ತರಣೆ - Karavali Times ಆಧಾರ್ ಕಾರ್ಡ್-ರೇಶನ್ ಕಾರ್ಡ್ ಲಿಂಕ್ ಮಾಡುವ ಅವಧಿ ಫೆಬ್ರವರಿ 29ರವರೆಗೆ ವಿಸ್ತರಣೆ - Karavali Times

728x90

1 February 2024

ಆಧಾರ್ ಕಾರ್ಡ್-ರೇಶನ್ ಕಾರ್ಡ್ ಲಿಂಕ್ ಮಾಡುವ ಅವಧಿ ಫೆಬ್ರವರಿ 29ರವರೆಗೆ ವಿಸ್ತರಣೆ

ಬೆಂಗಳೂರು, ಫೆಬ್ರವರಿ 02, 2024 (ಕರಾವಳಿ ಟೈಮ್ಸ್) : ಆಧಾರ್ ಕಾರ್ಡ್-ರೇಶನ್ ಕಾರ್ಡ್ ಲಿಂಕ್ ಮಾಡುವ ದಿನಾಂಕವನ್ನು ಫೆಬ್ರವರಿ 29 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. 

ಪಡಿತರ ಚೀಟಿಯೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು, ಇ-ಕೆವೈಸಿ ನವೀಕರಿಸಲು ಹಾಗೂ  ಪಡಿತರ ಚೀಟಿಯಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಅಂತಿಮ ದಿನಾಂಕವನ್ನು ಫೆಬ್ರವರಿ 29 ರವರೆಗೆ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಇನ್ನೂ ನೋಂದಾಯಿಸದ ಅಥವಾ ತಮ್ಮ ಮಾಹಿತಿಯನ್ನು ನವೀಕರಿಸದ ಗ್ರಾಹಕರಿಗೆ ಅನುಕೂಲವಾಗುವಂತೆ ದಿನಾಂಕವನ್ನು ವಿಸ್ತರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಇಲಾಖೆಯು ಗ್ರಾಹಕರ ಪಡಿತರ ಚೀಟಿಯೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುತ್ತಿದೆ ಎಂದು ಪ್ರಕಟಣೆ ತಿಳಿಸಿದ್ದು, ಫೆಬ್ರವರಿ 29 ರೊಳಗೆ ಗ್ರಾಹಕರು ತಮ್ಮ ಆಧಾರ್ ಸಂಖ್ಯೆಯನ್ನು ಪಡಿತರ ಚೀಟಿಗಳೊಂದಿಗೆ ಲಿಂಕ್ ಮಾಡಲು ವಿಫಲವಾದರೆ, ಅಂತಹವರ ಪಡಿತರ ಚೀಟಿಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುವುದು. ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರವೇ ಕಾರ್ಡ್ ಅನ್ನು ಅನ್‍ಬ್ಲಾಕ್ ಮಾಡಲಾಗುತ್ತದೆ ಎಂದು ಹೇಳಲಾಗಿದೆ. 

ಪಡಿತರ ಚೀಟಿಯಲ್ಲಿ ನಮೂದಿಸಲಾದ ಹೆಸರು, ಹುಟ್ಟಿದ ದಿನಾಂಕ ಮತ್ತು ಲಿಂಗವು ವ್ಯಕ್ತಿಯ ಆಧಾರ್ ಕಾರ್ಡ್‍ನಲ್ಲಿ ನಮೂದಿಸಿದ ಡೇಟಾದಂತೆಯೇ ಇರುವುದನ್ನು ಇ-ಕೆವೈಸಿ ಖಚಿತಪಡಿಸುತ್ತದೆ. ಇ-ಕೆವೈಸಿಯನ್ನು ಗ್ರಾಹಕರು ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡುವ ಮೂಲಕ ಮಾಡಿಸಿಕೊಳ್ಳಬಹುದು ಎಂದು ಹೇಳಿದೆ.

  • Blogger Comments
  • Facebook Comments

0 comments:

Post a Comment

Item Reviewed: ಆಧಾರ್ ಕಾರ್ಡ್-ರೇಶನ್ ಕಾರ್ಡ್ ಲಿಂಕ್ ಮಾಡುವ ಅವಧಿ ಫೆಬ್ರವರಿ 29ರವರೆಗೆ ವಿಸ್ತರಣೆ Rating: 5 Reviewed By: karavali Times
Scroll to Top