ಬೆಳ್ತಂಗಡಿ, ಫೆಬ್ರವರಿ 24, 2024 (ಕರಾವಳಿ ಟೈಮ್ಸ್) : ತಾಲೂಕಿನ ನ್ಯಾಯತರ್ಪು ಗ್ರಾಮದ ಜಾರಿಗೆಬೈಲು ಮಸೀದಿ ಬಳಿ ಶುಕ್ರವಾರ ಮಧ್ಯಾಹ್ನ ತಂಡಗಳ ಮಧ್ಯೆ ಹಲ್ಲೆ-ಪ್ರತಿ ಹಲ್ಲೆ ನಡೆದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದೆ.
ಈ ಬಗ್ಗೆ ಠಾಣೆಗೆ ದೂರು ನೀಡಿದ ಕಳಿಯಾ ಗ್ರಾಮದ ನಿವಾಸಿ ಮಹಮ್ಮದ್ ರಮೀಜ್ (32) ಅವರು, ಶುಕ್ರವಾರ (ಫೆ 23) ಮಧ್ಯಾಹ್ನ ನ್ಯಾಯಾತರ್ಪು ಗ್ರಾಮದ ಜಾರಿಗೆಬೈಲು ಮಸೀದಿ ಬಳಿಯಿದ್ದಾಗ ಪರಿಚಯದ ಆರೋಪಿ ಶಾಕೀರ್ ಎಂಬಾತ ಬಂದು ಹಲ್ಲೆ ನಡೆಸಿದ್ದು, ಆತನೊಂದಿಗೆ ಇದ್ದ ಇತರ ಆರೋಪಿಗಳಾದ ಜಾಬೀರ್, ಸಪ್ವಾನ್, ಸಿದ್ದಿಕ್, ನಾಸೀರ್, ರವೂಫ್ ಎಂಬವರುಗಳು ಕೂಡಾ ಹಲ್ಲೆ ನಡೆಸಿ ಅಲ್ಲಿಂದ ತೆರಳಿರುತ್ತಾರೆ. ನಂತರ ಭಾವನೊಂದಿಗೆ ಮನೆಗೆ ತೆರಳಿದಾಗ, ಅಲ್ಲಿಗೆ ಬಂದ ಆರೋಪಿಗಳು ಮನೆಗೆ ಬಂದು, ನನಗೆ ಹಾಗೂ ನನ್ನ ಪತ್ನಿಗೆ ಹಲ್ಲೆ ನಡೆಸಿರುತ್ತಾರೆ ಅಲ್ಲದೆ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿ ಮನೆಯಲ್ಲಿದ್ದ ಕುರ್ಚಿಗಳಿಗೆ ಹಾನಿ ಮಾಡಿ ತೆರಳಿರುತ್ತಾರೆ. ಹಲ್ಲೆಯ ವೇಳೆ ಕಿಸೆಯಲ್ಲಿದ್ದ 12,600/- ರೂಪಾಐಈ ಕಳವಾಗಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ, ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/2024 143, 147, 148, 323, 324, 504, 448, 354, 379 ಆರ್/ಡಬ್ಲ್ಯು 149 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿದೂರು ನೀಡಿರುವ ನ್ಯಾಯತರ್ಪು ಗ್ರಾಮದ ನಿವಾಸಿ ಅಬ್ದುಲ್ ಶಾಕಿರ್ (29) ಅವರ ದೂರಿನಂತೆ ಶುಕ್ರವಾರ (ಫೆ 23) ಮಧ್ಯಾಹ್ನ ನ್ಯಾಯಾತರ್ಪು ಗ್ರಾಮದ ಜಾರಿಗೆಬೈಲು ಮಸೀದಿಯ ಬಳಿಯಿದ್ದಾಗ, ಪರಿಚಯದ ಆರೊಪಿ ರಮೀಜ್ ಎಂಬಾತ ತಡೆದು ನಿಲ್ಲಿಸಿ, ಹಲ್ಲೆ ನಡೆಸಿರುತ್ತಾನೆ. ಆ ಬಳಿಕ ಬೆದರಿಕೆ ಹಾಕಿ ಹೋಗಿರುತ್ತಾನೆ ಎಂಬುದಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 24/2024 ಕಲಂ 341, 323, 504, 506, ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment