ಬಂಟ್ವಾಳ, ಫೆಬ್ರವರಿ 10, 2024 (ಕರಾವಳಿ ಟೈಮ್ಸ್) : ರ್ಯಾಪಿಕಡ್ ಇನ್ಫೋಟೆಕ್ ಕಂಪೆನಿಯ ಆಪ್ಟಿಕ್ ಫೈಬರ್ ಕೇಬಲ್ ತುಂಡರಿಸಿ ಕಂಪೆನಿಗೆ ನಷ್ಟ ಉಂಟು ಮಾಡಿದ ಬಗ್ಗೆ ಇಬ್ಬರು ಕಂಪೆನಿಯ ಮಾಜಿ ಉದ್ಯೋಗಿಗಳ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವೀನ್ ಪಿಂಟೋ ಹಾಗೂ ಪ್ರೀತಂ ಪಿಂಟೋ ಅವರೇ ಕೇಬಲ್ ತುಂಡರಿಸಿ ಕಂಪೆನಿಗೆ ನಷ್ಟ ಉಂಟು ಮಾಡಿದ ಆರೋಪಿಗಳು. ಈ ಬಗ್ಗೆ ರ್ಯಾಪಿಕಡ್ ಇನ್ಫೋಟೆಕ್ ಕಂಪೆನಿಯ ಉದ್ಯೋಗಿ ಸೊರ್ನಾಡು ನಿವಾಸಿ ವೀರೇಶ ಪಿಂಟೋ ಅವರು ಪೊಲೀಸರಿಗೆ ದೂರು ನೀಡಿದ್ದು, ಕಂಪನಿಯಲ್ಲಿ ಈ ಹಿಂದೆ ಕೆಲಸ ಮಾಡಿಕೊಂಡಿದ್ದ ನವೀನ ಪಿಂಟೋ ಹಾಗೂ ಪ್ರೀತಮ್ ಪಿಂಟೋ ಅವರು ಫೆ 3 ರಂದು ಸಂಜೆ ಅಮ್ಟಾಡಿ ಗ್ರಾಮದ ಲೊರೊಟ್ಟೊ ಚರ್ಚ ಬಳಿ ಕಂಪೆನಿಗೆ ಸೇರಿದ 1.50 ಲಕ್ಷ ರೂಪಾಯಿ ಮೌಲ್ಯದ ಆಪ್ಟಿಕ್ ಫೈಬರ ಕೇಬಲ್ ತುಂಡರಿಸಿ ಕಂಪೆನಿಗೆ ನಷ್ಟ ಉಂಟು ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 39/2024 ಕಲಂ 427 ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment