ಬಂಟ್ವಾಳ, ಫೆಬ್ರವರಿ 03, 2024 (ಕರಾವಳಿ ಟೈಮ್ಸ್) : ಮನೆ ಬಾಡಿಗೆ ಕರಾರು ಮುಗಿದ ಬಗ್ಗೆ ವಿಚಾರ ತಿಳಿಸಲು ತೆರಳಿದ ಮನೆ ಮಾಲಿಕನಿಗೆ ಬಾಡಿಗೆದಾರನೇ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ಪುದು ಗ್ರಾಮದ ಫರಂಗಿಪೇಟೆ ಸಮೀಪದ ಕುಂಪಣಮಜಲು ಎಂಬಲ್ಲ ಶುಕ್ರವಾರ ಮಧ್ಯಾಹ್ನ ವೇಳೆ ನಡೆದಿದೆ.
ಹಲ್ಲೆಗೊಳಗಾದ ಮನೆ ಮಾಲಿಕನನ್ನು ಸ್ಥಳೀಯ ನಿವಾಸಿ ಸಲೀಂ ಅಲ್ತಾಫ್ (48) ಎಂದು ಹೆಸರಿಸಲಾಗಿದ್ದು, ಹಲ್ಲೆ ನಡೆಸಿದ ಆರೋಪಿ ಬಾಡಿಗೆದಾರನನ್ನು ಶಬೀರ್ ಎಂದು ಗುರುತಿಸಲಾಗಿದೆ.
ಕುಂಪಣಮಜಲು ಎಂಬಲ್ಲಿನ ಡೈಮಂಡ್ ಹೋಂ ವಸತಿ ಸಂಕೀರ್ಣದ ಮಾಲಕ ಸಲೀಂ ಅಲ್ತಾಫ್ ಅವರು ತನ್ನ ಒಡೆತನದ ಡೈಮಂಡ್ ಹೋಂ ಎಂಬ ಅಪಾರ್ಟ್ ಮೆಂಟ್ ನಲ್ಲಿ, ಬಾಡಿಗೆಗೆ ವಾಸವಾಗಿದ್ದ ಶಬೀರ್ ಎಂಬಾತನು ಕಳೆದ ಒಂದು ವರ್ಷದಿಂದ ಬಾಡಿಗೆ ಕೊಡಲು ಬಾಕಿ ಇದ್ದು ಹಾಗೂ ಆತನ ಬಾಡಿಗೆ ಕರಾರು ಮುಗಿದ ಕಾರಣ ಆತನಿಗೆ ವಿಚಾರ ತಿಳಿಸುವ ಸಲುವಾಗಿ ಶುಕ್ರವಾರ ಮಧ್ಯಾಹ್ನ ವೇಳೆ ಅಪಾರ್ಟ್ ಮೆಂಟಿಗೆ ತೆರಳಿದ್ದರು. ಈ ವೇಳೆ ಗೇಟಿನ ಬಳಿ ಆರೋಪಿ ಶಬೀರ್ ಮನೆ ಮಾಲಕನನ್ನು ತಡೆದು ನಿಲ್ಲಿಸಿ ಅವರಿಗೆ ರಕ್ತ ಗಾಯವಾಗುವಂತೆ ಹಲ್ಲೆ ನಡೆಸಿರುತ್ತಾನೆ. ಬಳಿಕ ಅವ್ಯಾಚವಾಗಿ ಬೈದು ಮುಂದಕ್ಕೆ ಬಾಡಿಗೆ ಕೇಳಲು ಬಂದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಕತ್ತಿ ತೆಗೆಯಲು ಹೋದಾಗ ಸಲೀಂ ಅಲ್ತಾಫ್ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಸಲೀಂ ಅಲ್ತಾಫ್ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment