ಪುತ್ತೂರು, ಫೆಬ್ರವರಿ 20, 2024 (ಕರಾವಳಿ ಟೈಮ್ಸ್) : ದಂಪತಿ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕತ್ತಿ-ದೊಣ್ಣೆಗಳೊಂದಿಗೆ ಅಕ್ರಮ ಪ್ರವೇಶ ಮಾಡಿದ ತಂದೆ-ಮಗ ಅವಾಚ್ಯವಾಗಿ ಬೈದು, ಹಲ್ಲೆಗೆ ಯತ್ನಿಸಿದ್ದಲ್ಲದೆ ಜೀವ ಬೆದರಿಕೆ ಒಡ್ಡಿದ ಘಟನೆ ಪುತ್ತೂರು ತಾಲೂಕು, ನೆಟ್ಟಣಿಗೆ ಗ್ರಾಮದ ಮೆನಸಿನಕಾನ ಎಂಬಲ್ಲಿ ಭಾನುವಾರ (ಫೆ 18) ಸಂಜೆ ವೇಳೆ ನಡೆದಿದೆ.
ಇಲ್ಲಿನ ನಿವಾಸಿ ಭವಾನಿ (62) ಹಾಗೂ ಪತಿ ಬೆದರಿಕೆ ಒಳಗಾಗಿರುವ ದಂಪತಿ. ಈ ಬಗ್ಗೆ ಭವಾನಿ ಅವರು ಪೊಲೀಸರಿಗೆ ದೂರು ನೀಡಿದ್ದು, ಭಾನುವಾರ ಸಂಜೆ ವೇಳೆ ಮೆನಸಿನಕಾನ ಎಂಬಲ್ಲಿರುವ ತಮ್ಮ ಜಮೀನಿನಲ್ಲಿ ತನ್ನ ಗಂಡನೊಂದಿಗೆ ಕೆಲಸ ಮಾಡುತ್ತಿರುವಾಗ, ಆರೋಪಿಗಳಾದ ಗೋಪಾಲಕೃಷ್ಣ ಕುಂಜತ್ತಾಯ ಮತ್ತು ಅವರ ಮಗ ಅಶ್ವಿತ್ ಕುಂಜತ್ತಾಯ ಎಂಬವರು ಅಕ್ರಮವಾಗಿ ಜಮೀನಿಗೆ ಕತ್ತಿ ದೊಣ್ಣೆಗಳೊಂದಿಗೆ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಪ್ರಯತ್ನಿಸಿರುತ್ತಾರೆ. ಅಲ್ಲದೇ ಜೀವ ಬೆದರಿಕೆಯೊಡ್ಡಿ ಜಾಗದಲ್ಲಿನ ರಬ್ಬರ್ ಹಾಲು ತೆಗೆಯುವ ಸಲಕರಣೆಗಳನ್ನು ತೆಗೆದುಕೊಂಡು ಹೋಗಿರುತ್ತಾರೆ ಎಂದು ದೂರಲಾಗಿದೆ.
ಈ ಬಗ್ಗೆ ಭವಾನಿ ಅವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 29/2024 ಕಲಂ 1860 447, 504, 506, 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment