ಬೆಳ್ತಂಗಡಿ, ಫೆಬ್ರವರಿ 20, 2024 (ಕರಾವಳಿ ಟೈಮ್ಸ್) : ಮನೆಗೆ ಅಕ್ರಮ ಪ್ರವೇಶ ಮಾಡಿದ ಇಬ್ಬರು ಆರೋಪಿಗಳು ಮನೆಯಲ್ಲಿದ್ದವರಿಗೆ ಬೈದು, ಹಲ್ಲೆ ನಡೆಸಿ ಮನೆಯ ಹಂಚುಗಳಿಗೆ ಹಾನಿ ಮಾಡಿದ ಘಟನೆ ಬೆಳಾಲು ಗ್ರಾಮದಲ್ಲಿ ಭಾನುವಾರ (ಫೆ 18) ರಾತ್ರಿ ವೇಳೆ ನಡೆದಿದೆ.
ಇಲ್ಲಿನ ನಿವಾಸಿಗಳಾದ ವಿಶೇಷ ಗೌಡ ಅಲಿಯಾಸ್ ಚಿಂಟು (32) ಹಾಗೂ ಅವರ ಭಾವ ಪ್ರದೀಪ್ ಎಂದು ಹೆಸರಿಸಲಾಗಿದೆ. ಆರೋಪಿಗಳನ್ನು ಜಯಂತ ಗೌಡ, ಸ್ವಸ್ತಿಕ್ ಶಶಾಂಕ್ ಎಂದು ಗುರುತಿಸಲಾಗಿದೆ.
ಭಾನುವಾರ ರಾತ್ರಿ ವಿಶೇಷ ಗೌಡ ಹಾಗೂ ಪ್ರದೀಪ್ ಅವರು ಮನೆಯಲ್ಲಿದ್ದ ವೇಳೆ ಆರೋಪಿಗಳು ಮನೆಯಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಪ್ರದೀಪ್ ಅವರನ್ನು ಕರೆದಿದ್ದಾರೆ. ಈ ಸಂದರ್ಭ ಇಬ್ಬರೂ ಹೊರಗೆ ಬಂದಾಗ ಆರೋಪಿಗಳು ಅವ್ಯಾಚವಾಗಿ ಬೈದು ಹಲ್ಲೆ ನಡೆಸಿದ್ದು, ಬಳಿಕ ಮನೆಯ ಹಂಚುಗಳಿಗೆ ಹಾನಿ ಮಾಡಿ ಹೋಗಿರುತ್ತಾರೆ.
ಹಲ್ಲೆಯಿಂದ ಗಾಯಗೊಂಡ ವಿಶೇಷ ಗೌಡ ಹಾಗೂ ಪ್ರದೀಪ್ ಅವರು ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಬಗ್ಗೆ ವಿಶೇಷ ಗೌಡ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2024 ಕಲಂ 447, 323, 504, 324, 427, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಸ್ತಿಕ್ ಜೆ (25) ಅವರು ಪ್ರತಿದೂರು ನೀಡಿದ್ದು, ನನಗೆ ಹಾಗೂ ಶಶಾಂಕ್ ಎಂಬವರಿಗೆ ಭಾನುವಾರ (ಫೆ 18) ರಾತ್ರಿ ಬೆಳಾಲು ಗ್ರಾಮದ ಓಣಿಯಾಲು ಎಂಬಲ್ಲಿ ಆರೋಪಿಗಳಾದ ವಿಶೇಷಗೌಡ ಯಾನೆ ಚಿಂಟು, ಪ್ರದೀಪ್, ವೈಶಾಕ್, ಸುರೇಶ್ ಹಾಗೂ ಪಝಲ್ ಎಂಬವರುಗಳು ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿರುತ್ತಾರೆ ಹಾಗೂ ಜೀವ ಬೆದರಿಕೆ ಒಡ್ಡಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಇಬ್ಬರೂ ಚಿಕಿತ್ಸೆಗಾಗಿ ಉಜಿರೆ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂದು ದೂರಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 12/2024 ಕಲಂ 143, 147, 148, 324, 323, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಎರಡೂ ಪ್ರರಣಗಳನ್ನು ಕೈಗೆತ್ತಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
0 comments:
Post a Comment