ಉಪ್ಪಿನಂಗಡಿ, ಫೆಬ್ರವರಿ 02, 2024 (ಕರಾವಳಿ ಟೈಮ್ಸ್) : ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘಕ್ಕೆ ಇಬ್ಬರು ಆರೋಪಿಗಳು ನಕಲಿ ಆಭರಣ ನೀಡಿ ಲಕ್ಷ ರೂಪಾಯಿ ಪಡೆದು ವಂಚಿಸಿದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲ್ಯಾಡಿ ಗ್ರಾಮದ ನಿವಾಸಿಗಳಾದ ಸೆಬಾಸ್ಟಿಯನ್ ಹಾಗೂ ಡಾನಿಶ್ ಎಂಬವರುಗಳೇ ನಕಲಿ ಆಭರಣ ನೀಡಿ ಸಹಕಾರಿ ಸಂಘಕ್ಕೆ ವಂಚಿಸಿದ ಆರೋಪಿಗಳು. ಈ ಬಗ್ಗೆ ಸಂಘದ ಪ್ರಧಾನ ವ್ಯವಸ್ಥಾಪಕ ಚೈತನ್ಯ ಸಿ ಎಚ್ ಅವರು ಪೊಲೀಸರಿಗೆ ದೂರು ನೀಡಿದ್ದು, ಜನವರಿ 27 ರಂದು ಆರೋಪಿಗಳು 30 ಗ್ರಾಂ ತೂಕದ 4 ನಕಲಿ ಬಳೆಗಳನ್ನು ಅಡವಿಟ್ಟು ಸಂಘದಿಂದ 1 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂದು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 16 /2024 ಕಲಂ 406, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment