ಬೆಳ್ತಂಗಡಿ, ಫೆಬ್ರವರಿ 05, 2024 (ಕರಾವಳಿ ಟೈಮ್ಸ್) : ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ರಸ್ತೆ ಬದಿ ನಿಂತಿದ್ದ ಪಾದಚಾರಿಗಳಿಗೆ ಲಾರಿ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಉಜಿರೆ ಸಮೀಪದ ಗಾಂಧಿನಗರ ಎಂಬಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಮೃತ ಪಾದಚಾರಿಗಳನ್ನು ಕೃಷ್ಣಪ್ಪ ಮತ್ತು ಮೋಹಿನಿ ಎಂದು ಹೆಸರಿಸಲಾಗಿದೆ.
ಲಾರಿ ಚಾಲಕ ಬಸವರಾಜ್ ಎಂಬಾತನ ನಿರ್ಲಕ್ಷ್ಯ ಹಾಗೂ ದುಡುಕುತನದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬಳಿಕ ಲಾರಿ ಪಾದಚಾರಿಗಳ ಮೇಲೆ ಹರಿದಿದೆ. ಅಪಘಾತದ ತೀವ್ರತೆಗೆ ಇಬ್ಬರು ಪಾದಚಾರಿಗಳು ಕೂಡಾ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಲಾರಿ ಒಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದುದರಿಂದ ಅದಕ್ಕೆ ಸಂಪರ್ಕ ಇದ್ದ ಮತ್ತೆ ನಾಲ್ಕು ವಿದ್ಯುತ್ ಕಂಬಗಳು ಕೂಡ ತಂಡಾಗಿ ಬಿದ್ದು ಕಂಬಕ್ಕೆ ಆಳವಡಿಸಿದ ವಿದ್ಯುತ್ ತಂತಿಗಳು ಅಸ್ತವ್ಯಸ್ತಗೊಂಡಿದೆ.
ಈ ಬಗ್ಗೆ ಉಜಿರೆ ನಿವಾಸಿ ಪ್ರವೀಣ ಎಂಬವರು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 13/2024 ಕಲಂ 279,304(A) ಐಪಿಸಿ INDIAN ELECTRICITY ACT (AMEND)2003(U/S-139) ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment