ಬಂಟ್ವಾಳ, ಫೆಬ್ರವರಿ 19, 2024 (ಕರಾವಳಿ ಟೈಮ್ಸ್) : ಧಾರ್ಮಿಕ ನೆಲೆಗಟ್ಟಿನ ಕಾರ್ಯಕ್ರಮಗಳನ್ನು ಊರಿನಲ್ಲಿ ಯುವಕರು ಸಂಘಟಿಸುವಾಗ ಅವುಗಳನ್ನು ಪೆÇ್ರೀತ್ಸಾಹಿಸಿ ಊರಿನ ಯುವಕರಲ್ಲಿ ಸನ್ನಡತೆ ಮೈಗೂಡಿಸಲು ಪೆÇ್ರೀತ್ಸಾಹಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸಮಸ್ತ ಕೇಂದ್ರ ಮುಶಾವರ ಸದಸ್ಯ ಅಲ್‍ಹಾಜ್ ಅಬ್ದುಲ್ ಖಾದರ್ ಮುಸ್ಲಿಯಾರ್ ಅಲ್-ಖಾಸಿಮಿ ಬಂಬ್ರಾಣ ಹೇಳಿದರು.
ಅಲ್-ಅಮೀನ್ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಬಂಟ್ವಾಳ-ಕೆಳಗಿನಪೇಟೆಯಲ್ಲಿ ಶನಿವಾರ (ಫೆ 17) ರಾತ್ರಿ ನಡೆದ ಹೊನಲು ಬೆಳಕಿನ ದಫ್ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದಫ್ ಎಂಬುದು ಪವಿತ್ರ ಇಸ್ಲಾಮಿನ ನಾಲ್ಕು ಮದ್ಸ್ ಹಬ್ ಗಳೂ ಕೂಡಾ ಅನುಮತಿಸಿದ ಇಸ್ಲಾಮೀ ಕಲಾಪ್ರಕಾರವಾಗಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸ್ಪರ್ಧಾ ರೂಪದಲ್ಲಿ ಕಾರ್ಯಕ್ರಮ ಆಯೋಜಿಸುವುದು ಸಮ್ಮತಾರ್ಹವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ ಕೆ ಎಸ್ ಎಸ್ ಎಫ್ ಬಂಟ್ವಾಳ ವಲಯಾಧ್ಯಕ್ಷ ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಅವರು ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳು ಧರ್ಮದ ನೆಲೆಗಟ್ಟಿನಲ್ಲಿಯೇ ಆಯೋಜನೆಗೊಳ್ಳಬೇಕೇ ಹೊರತು ಇತರ ಲೌಕಿಕ ಅಥವಾ ಆಡಂಬರದ ಉದ್ದೇಶವನ್ನು ಹೊಂದುವಂತಾಗಬಾರದು ಎಂದರು.
ಸಯ್ಯಿದ್ ಇಬ್ರಾಹಿಂ ಬಾತಿಷಾ ತಂಙಳ್ ಆನೆಕಲ್ ದುವಾಶಿರ್ವಚನಗೈದರು. ಬಂಟ್ವಾಳ ಖತೀಬ್ ಮುಹಮ್ಮದ್ ರಿಯಾಝ್ ಫೈಝಿ ಮುಖ್ಯ ಭಾಷಣಗೈದರು. ಮಸೀದಿ ಅಧ್ಯಕ್ಷ ಅಹ್ಮದ್ ಶಾಫಿ, ಉಪಾಧ್ಯಕ್ಷ ಪಿ ಬಿ ಇಸ್ಮಾಯಿಲ್, ಎಸ್ ಡಿ ಪಿ ಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಬಂಟ್ವಾಳ ಪುರಸಭಾ ಸದಸ್ಯ ಮೂನಿಶ್ ಅಲಿ, ರಾಜ್ಯ ಗೇರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ ಎಚ್ ಖಾದರ್, ತೌಹೀದ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಹಾಜಿ ಅಬ್ದುಲ್ ರಹಿಮಾನ್, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹಾರೂನ್ ರಶೀದ್ ಬಂಟ್ವಾಳ, ಬಂಟ್ವಾಳ ಅಲ್-ಸಫರ್ ಫ್ರೆಂಡ್ಸ್ ಅಧ್ಯಕ್ಷ ಮುಹಮ್ಮದ್ ನಿಝಾಂ, ಮಾನವತಾ ಸೇವಾ ಸಂಸ್ಥೆಯ ಸ್ಥಾಪಕಾಧ್ಯಕ್ಷ ಮುಸ್ತಫಾ ಜೋಕಟ್ಟೆ, ಪುದು ಗ್ರಾ ಪಂ ಸದಸ್ಯ ಹಾಶೀರ್ ಪೇರಿಮಾರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಖಾದರ್ ಮಾಸ್ಟರ್ ಬಂಟ್ವಾಳ, ಮುಹಮ್ಮದ್ ಬಿಕಾಂ, ಡೈಮಂಡ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಅಲ್ತಾಫ್, ರಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಸದಸ್ಯ ಮಲ್ಲಿಕ್, ಉದ್ಯಮಿಗಳಾದ ಮುಸ್ತಫಾ ಫರಂಗಿಪೇಟೆ, ತೌಸೀಫ್, ಎಸ್ ಡಿ ಪಿ ಐ ಬಂಟ್ವಾಳ ಬೂತ್ ಅಧ್ಯಕ್ಷ ಕುರ್ಶಿದ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು, ಹಾಜಿ ಬಿ ಎಚ್ ಖಾದರ್ ಬಂಟ್ವಾಳ, ಅಬ್ದುಲ್ ಮಜೀದ್ ಫೈಝಿ ಕೋಲ್ಪೆ, ಯೂಸುಪ್ ಮುಸ್ಲಿಯಾರ್ ಕೋಲ್ಪೆ, ಹಾಫಿಳ್ ಸಯೀದ್ ಬಂಟ್ವಾಳ, ರಾಝಿಕ್ ವಿಟ್ಲ, ಮುಹಮ್ಮದ್ ಮುಸ್ತಫಾ ಜೋಕಟ್ಟೆ ಅವರನ್ನು ಸನ್ಮಾನಿಸಲಾಯಿತು.
ಇರ್ಶಾದ್ ಬಂಟ್ವಾಳ ಸ್ವಾಗತಿಸಿ, ಅಬ್ದುಲ್ ಖಾದರ್ ರಾಝಿ ವಂದಿಸಿದರು. ಪತ್ರಕರ್ತರಾದ ಲತೀಫ್ ನೇರಳಕಟ್ಟೆ ಹಾಗೂ ಪಿ ಎಂ ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು.
ಮಜೂರು ಸಿರಾಜುಲ್ ಹುದಾ ದಫ್ ತಂಡಕ್ಕೆ ಪ್ರಶಸ್ತಿ
ದಫ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಸಿರಾಜುಲ್ ಹುದಾ ದಫ್ ತಂಡ ಮಜೂರು ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಅಲ್-ಜಝೀರಾ ದಫ್ ತಂಡ ಅಕ್ಕರಕೆರೆ-ಉಳ್ಳಾಲ ದ್ವಿತೀಯ ಹಾಗೂ ಖಲಂದರ್ ಷಾ ದಫ್ ತಂಡ ಮಣಿಪು-ಕಟಪಾಡಿ ತೃತೀಯ ಸ್ಥಾನ ಪಡೆಯಿತು. ಕೃಷ್ಣಾಪುರ ಬದ್ರಿಯಾ ದಫ್ ತಂಡ ಉತ್ತಮ ಹಾಡುಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಇದಕ್ಕೂ ಮೊದಲು ಮಾ ಅಸೀಬ್ ಹಾಗೂ ಸಂಗಡಿಗರ ನೇತೃತ್ವದ ಇಷ್ಕೇ ಮದೀನ ಬುರ್‍ದಾ ಸಂಘದಿಂದ ಬುರ್‍ದಾ ಮಜ್ಲಿಸ್ ಕಾರ್ಯಕ್ರಮ ನಡೆಯಿತು.
0 comments:
Post a Comment