ಬಂಟ್ವಾಳ, ಫೆಬ್ರವರಿ 10, 2024 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಕೈಕುಂಜೆ ರಸ್ತೆ ಬದಿಯಲ್ಲಿ ನಿಲ್ಲಿಸಿದ ಅಟೋ ರಿಕ್ಷಾ ಕಾಣೆಯಾದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ನಿವಾಸಿ ದೇಜಪ್ಪ (45) ಅವರು ತನ್ನ ಅಟೋ ರಿಕ್ಷಾವನ್ನು ಫೆ 6 ರಂದು ಸಂಜೆ ಬಿ ಮೂಡ ಗ್ರಾಮ ಕೈಕುಂಜೆ ಎಂಬಲ್ಲಿ ರಸ್ತೆಬದಿ ನಿಲ್ಲಿಸಿ ಮಂಗಳೂರಿಗೆ ತೆರಳಿದ್ದು, ಮರುದಿನ ಅಂದರೆ ಫೆ 7 ರಂದು ಬೆಳಗ್ಗಿನ ಜಾವ ಬಂದು ನೋಡಿದಾಗ ನಿಲ್ಲಿಸಿದ್ದ ಅಟೋ ರಿಕ್ಷಾ ಕಾಣೆಯಾಗಿದೆ. ಈ ಬಗ್ಗೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಕಾಣೆಯಾದ ಅಟೋ ರಿಕ್ಷಾದ ಮೌಲ್ಯ 95 ಸಾವಿರ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ದೇಜಪ್ಪ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment