ಟೀಂ ರೆಬೆಲ್ಸ್ ತಂಡಕ್ಕೆ ಮೊದಲ ದಿನದ ಗೌರವ : ಮೂರೂ ಪಂದ್ಯಗಳಲ್ಲಿ ಜಯಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ
ಬಂಟ್ವಾಳ, ಫೆಬ್ರವರಿ 11, 2024 (ಕರಾವಳಿ ಟೈಮ್ಸ್) : ನ್ಯೂಸ್ಟಾರ್ ಸ್ಪೋಟ್ಸ್ ಕ್ಲಬ್ ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಸ್ಥಳೀಯ 6 ತಂಡಗಳ ನಿಗದಿತ ಓವರ್ ಗಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್) ಸೀಸನ್-8 ಕೂಟಕ್ಕೆ ಭಾನುವಾರ (ಫೆ 11) ಇಲ್ಲಿನ ಆಲಡ್ಕ ಮೈದಾನದಲ್ಲಿ ಚಾಲನೆ ದೊರೆಯಿತು.
ನೌಶಾದ್ ಮಾಲಕತ್ವದ ಟೀಂ ರೆಬೆಲ್ಸ್ ತಂಡವು ಆಡಿದ ಮೂರೂ ಪಂದ್ಯಗಳನ್ನು ಜಯಿಸಿ 6 ಅಂಕಗಳೊಂದಿಗೆ ಮೊದಲ ದಿನದ ಗೌರವ ಪಡೆದುಕೊಂಡಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಉಳಿದಂತೆ ಸತ್ತಾರ್ ಮಾಲಕತ್ವದ ಎಂ.ಎಸ್.ಎಂ. ಚಾಲೆಂಜರ್ಸ್ ತಂಡ ಆಡಿದ ಎರಡೂ ಪಂದ್ಯಗಳನ್ನು ಗೆದ್ದುಕೊಂಡು ಪೂರ್ಣ 4 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿದೆ. ಶಮೀರ್ ಮಾಲಕತ್ವದ ಇ-ಕ್ಲಬ್ ಕ್ರಿಕೆಟರ್ಸ್ ತಂಡವು ಆಡಿದ ಮೂರು ಪಂದ್ಯಗಳಲ್ಲಿ 2 ಗೆಲುವು ಹಾಗೂ 1 ಸೋಲಿನೊಂದಿಗೆ 4 ಅಂಕಗಳನ್ನು ಸಂಪಾದಿಸಿದೆ. ಅಬ್ದುಲ್ ರಹಿಮಾನ್ ಮಾಲಕತ್ವದ ಎಸ್.ಎಸ್. ವಾರಿಯರ್ಸ್ ತಂಡವು 3 ಪಂದ್ಯಗಳನ್ನು ಆಡಿದ್ದು, 2 ಸೋಲು ಹಾಗೂ 1 ಜಯದೊಂದಿಗೆ 2 ಅಂಕಗಳು, ಅಸ್ತರ್ ಮಾಲಕತ್ವದ ಟೀಂ ಡಿಎಕ್ಸ್ ತಂಡವು 4 ಪಂದ್ಯಗಳಲ್ಲಿ 3 ಸೋಲು ಹಾಗೂ 1 ಟೈ ಮೂಲಕ 1 ಅಂಕ ಹಾಗೂ ಝೈದ್ ಮಾಲಕತ್ವ ರೈಸಿಂಗ್ ಸ್ಟಾರ್ ತಂಡವು 3 ಪಂದ್ಯಗಳಲ್ಲಿ 2 ಸೋಲು ಹಾಗೂ 1 ಟೈ ಮೂಲಕ 1 ಅಂಕವನ್ನು ಪಡೆದುಕೊಂಡಿದೆ.
ಕೂಟದ ಉಳಿದ ಲೀಗ್ ಪಂದ್ಯಗಳು ಹಾಗೂ ಪ್ರಶಸ್ತಿ ಸುತ್ತಿನ ಪಂದ್ಯಾಟಗಳು ಮುಂದಿನ ಭಾನುವಾರ (ಫೆಬ್ರವರಿ 18) ನಡೆಯಲಿದೆ.
ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಭೂಯಾ ಸ್ಪೋಟ್ರ್ಸ ಕ್ಲಬ್ ಸಂಚಾಲಕ ಶರೀಫ್ ಭೂಯಾ, ಪ್ರಮುಖರಾದ ಹಸನಬ್ಬ, ಝುಬೈರ್ ಯು, ಇಕ್ಬಾಲ್ ಸಜಿಪ, ಆಸಿಫ್ ಆಚಿ ಬೋಳಂಗಡಿ, ಅಬ್ದುಲ್ ಅಝೀಝ್ ಬಂಗ್ಲೆಗುಡ್ಡೆ, ಮುಹಮ್ಮದ್ ರಫೀಕ್ ಮೊಮ್ಮು ಆಲಡ್ಕ, ಸಿರಾಜ್, ಕಬೀರ್ ಬಂಗ್ಲೆಗುಡ್ಡೆ, ರಿಝ್ವಾನ್ ಪಿ ಜೆ, ಅಝ್ಮಲ್ ಪಿ ಜೆ, ಖಲಂದರ್ ಎ2ಝಡ್, ರಿಯಾಝ್ ಎಸ್ ಆರ್, ಶರೀಕ್ ಎಸ್.ಆರ್. ಮೊದಲಾದವರು ಉಪಸ್ಥಿತರಿದ್ದರು.
ನೂಸ್ಟಾರ್ ಸಂಚಾಲಕ ಶಫೀಕ್ ಯು ಸ್ವಾಗತಿಸಿ, ಅಶ್ರಫ್ ಯು ವಂದಿಸಿದರು. ಪತ್ರಕರ್ತ ಪಿ ಎಂ ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ಅಶ್ರಫ್ ನಂದಾವರ, ಮನ್ಸೂರ್ ನಂದಾವರ ಹಾಗೂ ನಿಝಾಂ ನಂದಾವರ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ನಾಗೇಶ್ ಬಂಟ್ವಾಳ ಹಾಗೂ ಝೈದ್ ನಂದಾವರ ವೀಕ್ಷಕ ವಿವರಣೆ ನೀಡಿದರು.
0 comments:
Post a Comment