ಬಂಟ್ವಾಳ, ಫೆಬ್ರವರಿ 10, 2024 (ಕರಾವಳಿ ಟೈಮ್ಸ್) : ನ್ಯೂಸ್ಟಾರ್ ಸ್ಪೋಟ್ಸ್ ಕ್ಲಬ್ ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಸ್ಥಳೀಯ 6 ತಂಡಗಳ ನಿಗದಿತ ಓವರ್ ಗಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್) ಸೀಸನ್-8 ಕೂಟವು ಫೆಬ್ರವರಿ 11 ರಂದು ಭಾನುವಾರ ಹಾಗೂ 18 ರಂದು ಭಾನುವಾರ ಆಲಡ್ಕ ಮೈದಾನದಲ್ಲಿ ನಡೆಯಲಿದೆ.
ಕೂಟದಲ್ಲಿ ಸತ್ತಾರ್ ಮಾಲಕತ್ವದ ಎಂ.ಎಸ್.ಎಂ. ಚಾಲೆಂಜರ್ಸ್, ಅಬ್ದುಲ್ ರಹಿಮಾನ್ ಮಾಲಕತ್ವದ ಎಸ್.ಎಸ್. ವಾರಿಯರ್ಸ್, ನೌಶಾದ್ ಮಾಲಕತ್ವದ ಟೀಂ ರೆಬೆಲ್ಸ್, ಶಮೀರ್ ಮಾಲಕತ್ವದ ಇ-ಕ್ಲಬ್, ಅಸ್ತರ್ ಮಾಲಕತ್ವದ ಟೀಂ ಡಿ.ಎಕ್ಸ್ ಹಾಗೂ ಝೈದ್ ಮಾಲಕತ್ವದ ರೈಸಿಂಗ್ ಸ್ಟಾರ್ ತಂಡಗಳು ಸೆಣಸಾಟ ನಡೆಸಲಿದೆ.
ಲೀಗ್ ಮಾದರಿಯಲ್ಲಿ ನಡೆಯುವ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 20 ಸಾವಿರ ರೂಪಾಯಿ ನಗದು ಹಾಗೂ ನ್ಯೂಸ್ಟಾರ್ ಟ್ರೋಫಿ ನೀಡಲಾಗುವುದು ಅಲ್ಲದೆ ವೈಯುಕ್ತಿಕ ಬಹುಮನಗಳಾದ ಉತ್ತಮ ದಾಂಡುಗಾರ, ದಾಳಿಗಾರ, ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಕೂಟದ ಸಂಚಾಲಕ ಶಫೀಕ್ ಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment