ರೋಚಕ ಟೈ ಮೂಲಕ ಅಂತ್ಯಗೊಂಡ ಫೈನಲ್ ಪಂದ್ಯ : ನಾಣ್ಯ ಚಿಮ್ಮುಗೆಯಲ್ಲಿ ಅದೃಷ್ಟಶಾಲಿಯಾಗಿ ಹೊರಹೊಮ್ಮಿದ ಅಝ್ಮಲ್ ಬಳಗ
ಬಂಟ್ವಾಳ, ಫೆಬ್ರವರಿ 19, 2024 (ಕರಾವಳಿ ಟೈಮ್ಸ್) : ನ್ಯೂಸ್ಟಾರ್ ಸ್ಪೋಟ್ಸ್ ಕ್ಲಬ್ ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಸ್ಥಳೀಯ 6 ತಂಡಗಳ £ಗದಿತ ಓವರ್ ಗಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಟೂರ್ನಿ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್) ಸೀಸನ್-8 ರ ಫೈನಲ್ ಪಂದ್ಯಾಟ ರೋಚಕ ಟೈ ಮೂಲಕ ಅಂತ್ಯಗೊಂಡಿದ್ದು, ಸತ್ತಾರ್ ಮಾಲಕತ್ವದ ಎಂ.ಎಸ್.ಎಂ. ಚಾಲೆಂಜರ್ಸ್ ನಾಣ್ಯ ಚಿಮ್ಮುಗೆಯ ಅದೃಷ್ಟದಾಟದಲ್ಲಿ ಚಾಂಪಿಯನ್ ಆಗಿ ಮೂಡಿಬಂತು, ಶಮೀರ್ ಮಾಲಕತ್ವದ ಇ-ಕ್ಲಬ್ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಫೆಬ್ರವರಿ 18 ರಂದು ಭಾನುವಾರ ಇಲ್ಲಿನ ಆಲಡ್ಕ ಮೈದಾನದಲ್ಲಿ ನಡೆದ ಟೂರ್ನಿಯಲ್ಲಿ ವಿಜೇತ ತಂಡಗಳಿಗೆ ಮಾಜಿ ಸಚಿವ ಬಿ ರಮಾನಾಥ ರೈ ಪ್ರಶಸ್ತಿ ವಿತರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪುರಸಭಾ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಶರೀಫ್ ಭೂಯಾ, ಯುವ ಘಟಕದ ಜಿಲ್ಲಾ ಕಾರ್ಯದರ್ಶಿ ಇರ್ಶಾದ್ ಗುಡ್ಡೆಅಂಗಡಿ, ಪಾಣೆಮಂಗಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪಿ ಎಸ್ ಮೊಹಮ್ಮದ್ ಇಕ್ಬಾಲ್ ಜೆಟಿಟಿ, ಉದ್ಯಮಿಗಳಾದ ರವಳನಾಥ ನಾಯಕ್ ಮೆಲ್ಕಾರ್, ಇನ್ಸಾಫ್ ಅಕ್ಕರಂಗಡಿ, ಅನ್ಸಾರ್ ಫಾರೆಸ್ಟ್, ಪ್ರಮುಖರಾದ ಅಬ್ದುಲ್ ಹಮೀದ್ ಮೋನು ಜೈಭಾರತ್ ನಂದಾವರ, ಮುತ್ತಾಲಿಬ್, ನಿಸಾರ್ ಅಕ್ಕರಂಗಡಿ, ರಿಝ್ವಾನ್ ಅಕ್ಕರಂಗಡಿ, ಅಬ್ದುಲ್ ಖಾದರ್ ಪುತ್ತುಮೋನು, ಡೆಂಝಿಲ್ ನೊರೊನ್ಹಾ ಅಲ್ಲಿಪಾದೆ, ತಿಲಕ್ ಮಂಚಿ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.
ಎಂ ಎಸ್ ಎಂ ಚಾಲೆಂಜರ್ಸ್ ತಂಡದ ಅಝ್ಮಲ್ ಪಿ ಜೆ ಸರಣಿ ಶ್ರೇಷ್ಠ ಹಾಗೂ ಉತ್ತಮ ದಾಂಡುಗಾರ ಪ್ರಶಸ್ತಿಯನ್ನು ಪಡೆದುಕೊಂಡರೆ, ಆಸಿಪ್ ಮಾಡೂರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಇ-ಕ್ಲಬ್ ತಂಡ ಇಂತಿಯಾಝ್ ಉತ್ತಮ ದಾಳಿಗಾರ ಪ್ರಶಸ್ತಿಗೆ ಭಾಜನರಾದರು.
ಪ್ರಮುಖರಾದ ಕಬೀರ್ ಬಂಗ್ಲೆಗುಡ್ಡೆ, ತಮೀಮ್, ಸಾಬಿತ್ ಪಡ್ಪು, ಇರ್ಫಾನ್ ಯು, ರಿಝ್ವಾನ್ ಪಿ ಜೆ, ಅಝ್ಮಲ್ ಪಿ ಜೆ, ಖಲಂದರ್ ಎ2ಝಡ್, ರಿಯಾಝ್ ಎಸ್ ಆರ್, ಶರೀಕ್ ಎಸ್.ಆರ್. ಹಸನಬ್ಬ, ಇಕ್ಬಾಲ್ ಸಜಿಪ, ಆಸಿಫ್ ಆಚಿ ಬೋಳಂಗಡಿ, ಅಬ್ದುಲ್ ಅಝೀಝ್ ಬಂಗ್ಲೆಗುಡ್ಡೆ, ಮುಹಮ್ಮದ್ ರಫೀಕ್ ಮೊಮ್ಮು ಆಲಡ್ಕ, ಮೊದಲಾದವರು ಉಪಸ್ಥಿತರಿದ್ದರು.
ನೌಶಾದ್ ಮಾಲಕತ್ವದ ಟೀಂ ರೆಬೆಲ್ಸ್ ಅಬ್ದುಲ್ ರಹಿಮಾನ್ ಮಾಲಕತ್ವದ ಎಸ್ ಎಸ್ ವಾರಿಯರ್ಸ್, ಅಸ್ತರ್ ಮಾಲಕತ್ವದ ಟೀಂ ಡಿಎಕ್ಸ್, ಝೈದ್ ಮಾಲಕತ್ವ ರೈಸಿಂಗ್ ಸ್ಟಾರ್ ತಂಡಗಳು ಕೂಟದಲ್ಲಿ ಭಾಗವಹಿಸಿತ್ತು.
ನೂಸ್ಟಾರ್ ಸಂಚಾಲಕ ಶಫೀಕ್ ಯು ಸ್ವಾಗತಿಸಿ, ಅಶ್ರಫ್ ಯು ವಂದಿಸಿದರು. ಪತ್ರಕರ್ತ ಪಿ ಎಂ ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ £ರೂಪಿಸಿದರು. ಅಶ್ರಫ್ ನಂದಾವರ, ಮನ್ಸೂರ್ ನಂದಾವರ ಹಾಗೂ ನಿಝಾಂ ನಂದಾವರ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಝೈದ್ ನಂದಾವರ ವೀಕ್ಷಕ ವಿವರಣೆ ನೀಡಿದರು. ಸುಹೈಲ್ ನಂದಾವರ ಸ್ಕೋರರ್ ಆಗಿ ಕಾರ್ಯನಿರ್ವಹಿಸಿದರು.
0 comments:
Post a Comment