ಬಂಟ್ವಾಳ, ಫೆಬ್ರವರಿ 02, 2024 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮದ ಮಲಾಯಿಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿ ಆಶ್ರಯದಲ್ಲಿ ಪ್ರತಿ ವರ್ಷ ನಡೆಯುವ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮದ 21ನೇ ವಾರ್ಷಿಕ ಕಾರ್ಯಕ್ರಮವು ಫೆಬ್ರವರಿ 4 ರಂದು ಭಾನುವಾರ ಮಗ್ರಿಬ್ ಬಳಿಕ ಮಸೀದಿ ವಠಾರದಲ್ಲಿ ನಡೆಯಲಿದೆ.
ಸಯ್ಯಿದ್ ಹುಸೈನ್ ಬಾ-ಅಲವಿ ತಂಙಳ್ ಕುಕ್ಕಾಜೆ ದುವಾಶೀರ್ವಚನಗೈಯಲಿದ್ದು, ಕೆ ಪಿ ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಅವರು ಸ್ವಲಾತ್ ಮಜ್ಲಿಸ್ ನೇತೃತ್ವ ವಹಿಸುವರು. ವಳಚ್ಚಿಲ್ ಜುಮಾ ಮಸೀದಿ ಖತೀಬ್ ಕೆ ಐ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಲ ಅವರು ಹೆಣ್ಣೊಂದು ಮದುವೆಯಾದರೆ ಎಂಬ ವಿಷಯದಲ್ಲಿ ಮುಖ್ಯ ಭಾಷಣಗೈಯುವರು.
ಈ ಪ್ರಯುಕ್ತ ಫೆಬ್ರವರಿ 3 ರಂದು ಶನಿವಾರ ಮಗ್ರಿಬ್ ಬಳಿಕ ನಂದಾವರ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಖಾಸಿಂ ದಾರಿಮಿ ಅವರು ಸಂಪೂರ್ಣ ಇಸ್ಲಾಂ ಎಂಬ ವಿಷಯದಲ್ಲಿ ಉಪನ್ಯಾಸಗೈಯುವರು ಎಂದು ಮಲಾಯಿಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಯೂಸುಫ್ ಕರಂದಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment