ಬೆಳ್ತಂಗಡಿ, ಜನವರಿ 20, 2024 (ಕರಾವಳಿ ಟೈಮ್ಸ್) : ತಾಲೂಕಿನ ಕೊಯ್ಯೂರು ಗ್ರಾಮದ ಸುದೆಮುಗೇರು ಎಂಬಲ್ಲಿ ಸೋಮಾವತಿ ನದಿ ಕಿನಾರೆಯಿಂದ ಹಿಟಾಚಿ ಬಳಸಿ, ಮರಳು ಕಳವುಗೈದು ಮಾರಾಟಕ್ಕಾಗಿ ಸಾಗಾಟ ಮಾಡಲು ತಯಾರು ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೆಳ್ತಂಗಡಿ ಪಿಎಸ್ಸೈ ಮುರಳಿಧರ ನಾಯ್ಕ ಕೆ ಜೆ ಅವರ ನೇತೃತ್ವದ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಆರೋಪಿಗಳಾದ ಬಿ ರಹೀಮ್, ನಾಸಿರುದ್ದೀನ್ ಅಲಿಯಾಸ್ ನಾಸಿರ್, ಸಂಶುದ್ದೀನ್ ಹಾಗೂ ಅಬ್ದುಲ್ ಮಜೀದ್ ಎಂಬವರು ನದಿ ಕಿನಾರೆಗೆ ಜಾಲರಿ ಅಳವಡಿಸಿ, ಹಿಟಾಚಿ ಬಳಸಿ ಟಿಪ್ಪರ್ ಲಾರಿಯಲ್ಲಿ ಚರಳು ಮಿಶ್ರಿತ ಮರಳು ಕಳ್ಳತನ ಮಾಡಿ ಮಾರಾಟಕ್ಕಾಗಿ ಸಾಗಾಟ ಮಾಡಲು ತಯಾರಿ ನಡೆಸುತ್ತಿದ್ದುದನ್ನು ಪತ್ತೆ ಹಚ್ಚಿದ್ದಾರೆ.
ದಾಳಿ ವೇಳೆ ಪೊಲೀಸರು ಸ್ಥಳದಲ್ಲಿದ್ದ ಅಂದಾಜು 23.56 ಲಕ್ಷ ರೂಪಾಯಿ ಮೌಲ್ಯದ ವಾಹನ ಹಾಗೂ 3 ಸಾವಿರ ರೂಪಾಯಿ ಮೌಲ್ಯದ ಮರಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ದ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 04/2024 ಕಲಂ 379 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment