ಬಂಟ್ವಾಳ, ಜನವರಿ 25, 2024 (ಕರಾವಳಿ ಟೈಮ್ಸ್) : ನವದೆಹಲಿಯಲ್ಲಿ ಜನವರಿ 26 ರಂದು (ನಾಳೆ) ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆಯ “ರಿಪಬ್ಲಿಕ್ ಡೇ ಪೇರೆಡ್-2024” ಕಾರ್ಯಕ್ರಮದಲ್ಲಿ 18 ಕರ್ನಾಟಕ ಬ್ಯಾಟಲಿಯನ್ ಎನ್ ಸಿ ಸಿ ಮಂಗಳೂರು ಗ್ರೂಪಿನಿಂದ 3/18 ಕರ್ನಾಟಕ ಬ್ಯಾಟಲಿಯನ್ ಎನ್ ಸಿ ಸಿ ಆರ್ಮಿ ವಿಂಗ್ ಬಂಟ್ವಾಳ ಎಸ್ ವಿ ಎಸ್ ಕಾಲೇಜಿನ ತೃತೀಯ ಬಿಎಸ್ಸಿ ವಿದ್ಯಾರ್ಥಿ ಹಾಗೂ ಎನ್ ಸಿ ಸಿ ಕೆಡೆಟ್ ಸಾರ್ಜೆಂಟ್ ಜಿತೇಶ್ ಕೆ ಅವರು ಭಾಗವಹಿಸಲಿದ್ದಾರೆ.
ಕಾಲೇಜು ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ನವದೆಹಲಿಯ ಗಣರಾಜ್ಯೋತ್ಸವ ಪೆರೇಡಿಗೆ ಇಲ್ಲಿನ ವಿದ್ಯಾರ್ಥಿ ಆಯ್ಕೆಯಾಗಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.
ಇವರಿಗೆ ಕಾಲೇಜು ಆಡಳಿತಮಂಡಳಿಯ ಅಧ್ಯಕ್ಷ ಕೂಡಿಗೆ ಪಾಂಡುರಂಗ ಶೆಣೈ, ಕಾರ್ಯದರ್ಶಿ ಕೂಡಿಗೆ ಪ್ರಕಾಶ್ ಶೆಣೈ ಮತ್ತು ಅನಿರುದ್ಧ ಕಾಮತ್, ಬಂಟ್ವಾಳ ಎಸ್ ವಿ ಎಸ್ ಸಮೂಹ ಸಂಸ್ಥೆಗಳ ಸಂಚಾಲಕಿ ಕೆ ರೇಖಾ ಶೆಣೈ, ಬಂಟ್ವಾಳ ಎಸ್ ವಿ ಎಸ್ ಸಮೂಹ ಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.
0 comments:
Post a Comment