ಬಂಟ್ವಾಳ, ಜನವರಿ 10, 2024 (ಕರಾವಳಿ ಟೈಮ್ಸ್) : ವಿಟ್ಲ ಪೊಲೀಸ್ ಠಾಣೆಯ ಅಪರಾಧ ಕ್ರಮಾಂಕ 126/2017 ಕಲಂ 379 ಆರ್/ಡಬ್ಲ್ಯು 34 ಐಪಿಸಿ ಅಡಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ನರಿಂಗಾನ ಗ್ರಾಮದ ನಿವಾಸಿ ಸಿದ್ದೀಕ್ ಕೆ ಎಂ (46) ಎಂಬಾತನನ್ನು ಸೋಮವಾರ ರಾತ್ರಿ ವಿಟ್ಲ ಪೊಲೀಸರು ನರಿಂಗಾನ ಗ್ರಾಮದ ಕೆದಂಬಾರಿ ಜಂಕ್ಷನ್ನಿನಲ್ಲಿ ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ.
ವಿಟ್ಲ ಠಾಣಾ ಸಿಬ್ಬಂದಿಗಳಾದ ಪುನೀತ್, ಹೇಮರಾಜ್, ಆಶೋಕ್ ಅವರು ಈ ಕಾರ್ಯಾಚರಣೆ ನಡೆಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಂಧಿತ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ನ್ಯಾಯಾಲಯವು 11 ಸಾವಿರ ರೂಪಾಯಿ ಮೊತ್ತದ ದಂಡ ವಿಧಿಸಲಾಗಿದೆ.
ಸದ್ರಿ ಪ್ರಕರಣವು ಮರಳು ಸಾಗಾಟದ ಪ್ರಕರಣವಾಗಿದ್ದು, ಆರೋಪಿಯ ಬಗ್ಗೆ ಯಾವುದೇ ದಾಖಲೆ/ ಭಾವಚಿತ್ರ ಇಲ್ಲದೇ ಇದ್ದುದರಿಂದ ದಸ್ತಗಿರಿಗೆ ತೊಡಕಾಗಿದ್ದು, ಲಾರಿಯ ದಾಖಲಾತಿಯ ಬಗ್ಗೆ ಎಎಸ್ಸೈ ಜಯರಾಮ ಅವರು ಜಿಲ್ಲೆಯ ಆರ್ ಟಿ ಒ ಕಚೇರಿಗಳಿಂದ ಮತ್ತು ಎಲ್ ಐ ಸಿ ಕಚೇರಿಯಿಂದ ಆರೋಪಿಗೆ ಸಂಬಂಧಪಟ್ಟ ದಾಖಲಾತಿ ಮತ್ತು ಭಾವಚಿತ್ರ ಸಂಗ್ರಹಿಸಿ ಆರೋಪಿಯ ಬಗ್ಗೆ ಮಾಹಿತಿ ಕಲೆಹಾಕಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment